ಇಂದು ಶಾಸಕ ಬಸವರಾಜ ಬೊಮ್ಮಾಯಿ ಪ್ರವಾಸ
ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಜೂ. 30ರಂದು ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಜೂ. 30ರ ಬೆಳಗ್ಗೆ 11 ಗಂಟೆಗೆ ಶಿಗ್ಗಾಂವಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವದಲ್ಲಿ ಭಾಗವಹಿಸುವುರು. ಮಧ್ಯಾಹ್ನ 3ಗಂಟೆಗೆ ಶಿಗ್ಗಾಂವಿ ಗುರುಭವನದಲ್ಲಿ ಜರುಗುವ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರ ಭೇಟಿಯಾಗಿ ಚರ್ಚೆ ನಡೆಸುವರು. 4ಕ್ಕೆ ಸವಣೂರಿನ ವಿಠೋಭ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6-30ಕ್ಕೆ ಸವಣೂರನಿಂದ ರಸ್ತೆ ಮೂಲಕ ಬಂಕಾಪುರ-ಶಿಗ್ಗಾಂವಿ ಮಾರ್ಗವಾಗಿ 7-30ಕ್ಕೆ ಹುಬ್ಬಳ್ಳಿ ತಲುಪಿ ಹುಬ್ಬಳ್ಳಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.