ಡೆಂಘೀ: ಇಂದು ಉಚಿತ ತಪಾಸಣೆ ಶಿಬಿರ
ಹಾವೇರಿ: ನಗರದ ವರದಾ ಹೆಲ್ತ್ ಫೌಂಡೇಶನ್ ಮತ್ತು ವರದಾ ಆಸ್ಪತ್ರೆಯಿಂದ ಜೂ. 30ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಡೆಂಘೀ ಜ್ವರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ನಾನಾ ರೀತಿಯ ಜ್ವರಗಳು ಕಾಣಿಸಿಕೊಳ್ಳುತ್ತಿದ್ದು, ಜನತೆ ಆತಂಕಕ್ಕೊಳಗಾಗುವಂತೆ ಮಾಡಿದೆ. ಇವೆಲ್ಲವುಗಳ ಬಗ್ಗೆ ತಿಳಿವಳಿಕೆ ನೀಡಿ ಹಾಗೂ ಔಷಧಿ ವಿತರಿಸಲು ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಪ್ರಕಟಣೆ ತಿಳಿಸಿದೆ. ಚಿಕ್ಯುನ್ಗುನ್ಯಾ, ಡೆಂಘೀ ಜ್ವರ, ಹಂದಿಜ್ವರವನ್ನು ತಜ್ಞ ಆಯುರ್ವೇದ ವೈದ್ಯರು ತಪಾಸಣೆ ಮಾಡಲಿದ್ದಾರೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಫೌಂಡೇಶನ್ ಅಧ್ಯಕ್ಷ ಡಾ ಜಿ.ಜಿ. ಹೂಲಿಕಟ್ಟಿ ಕೋರಿದ್ದಾರೆ. ಮಾಹಿತಿಗೆ ಮೊ- 9449122030ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.