ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

100ರಷ್ಟು ಸಾಕ್ಷರತೆಗೆ ಶ್ರಮಿಸಿ: ಮನೋಹರ ತಹಸೀಲ್ದಾರ್

Mainashree
Updated On : 1 Jul 2013, 10:40 am

ಹಾನಗಲ್ಲ: ದೇಶ ಹಾಗೂ ರಾಜ್ಯದಲ್ಲಿ ಸಾಕ್ಷರತೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ಹಾವೇರಿ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ. 78ರಷ್ಟು ಆಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರರನ್ನು ಮಾಡಲು ಪ್ರೇರಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಮನೋಹರ ತಹಸೀಲ್ದಾರ್ ಪ್ರೇರಕರಿಗೆ ಸಲಹೆ ನೀಡಿದರು. ಪಟ್ಟಣದ ತಾಲೂಕು ಸಭಾಭವನದಲ್ಲಿ ನಡೆದ ಸಾಕ್ಷರ ಭಾರತ ಎರಡನೇ ಹಂತದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರ ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡಲು ಹಾಕಿಕೊಂಡ ಕಾರ್ಯಕ್ರಮ ಈಗ ಯಶಸ್ವಿ ಆಗಿದ್ದು, ಇನ್ನು ಉತ್ತಮ ರೀತಿಯಲ್ಲಿ ಸಂಯೋಜಕರು ಕಾರ್ಯನಿರ್ವಹಿಸಬೇಕಿದೆ. ಇವರ ಕಾರ್ಯಕ್ಕೆ ಅಧಿಕಾರ ವರ್ಗ ಸಲಹೆ, ಸಹಕಾರ ನೀಡಬೇಕು ಎಂದು ಹೇಳಿದರು. ಸಾಕ್ಷರತಾ ಸಂಯೋಜಕ, ಪ್ರೇರಕ, ಪ್ರೇರಕಿಯರ ಪರ ತಾಪಂ ಇಒ ಮನೋಜಕುಮಾರ ಗಡಬಳ್ಳಿ, ಶಾಸಕ ಮನೋಹರ ತಹಸೀಲ್ದಾರ್ ಅವರನ್ನು ಸನ್ಮಾನಿಸಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಕಾನಿ, ಮಹದೇವಪ್ಪ ಬಾಗಸರ, ರಾಜೇಂದ್ರ ಬಾರ್ಕಿ, ಕಲವೀರಪ್ಪ ಪವಾಡಿ, ಸುರೇಶ ನೆರಕಿನಮನಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement