ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನುಸೂಚಿತ ಜಾತಿಗಳ ಆಯೋಗ ಸಭೆಗೆ 200 ಡಿಎಸ್ಸೆಸ್ ಕಾರ್ಯಕರ್ತರು

Mainashree
Updated On : 1 Jul 2013, 10:40 am

ಹಾನಗಲ್ಲ: ರಾಷ್ಟ್ರೀಯ ಅನುಸೂಚಿತ ಜಾತಿಗಳ ಆಯೋಗ ಜು. 2ರಂದು ಬೆಂಗಳೂರಿನಲ್ಲಿ ಕರೆದಿರುವ ಸಭೆಗೆ ಜಿಲ್ಲೆಯ 200ಕ್ಕೂ ಅಧಿಕ ಡಿಎಸ್‌ಎಸ್ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ಜಿಲ್ಲಾ ಸಂಚಾಲಕ ನಿಂಗಪ್ಪ ಗಾಳೆಮ್ಮನವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಜಾತಿಯಲ್ಲಿ ಇರುವ ಜಾತಿಗಳ ಹೆಸರನ್ನು ಸೇರ್ಪಡೆಗೊಳಿಸುವುದು ಹಾಗೂ ತೆಗೆದು ಹಾಕುವ ಕುರಿತು ಆಯೋಗ ನಡೆಸುತ್ತಿರುವ ಸಭೆಯಲ್ಲಿ ವಿವಿಧ ಸಮಾಜಗಳಿಗೆ ಆಗುವ ಅನ್ಯಾಯ ಖಂಡಿಸಿ ಹೇಳಿಕೆ ನೀಡಲು ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಪ. ಜಾತಿಯಲ್ಲಿರುವ ಜಾತಿಗಳ ಹೆಸರನ್ನು ಸೇರ್ಪಡೆ ಹಾಗೂ ಕೈಬಿಡುವ ವಿಷಯದ ಕುರಿತು ಆಯೋಗ ಚರ್ಚಿಸುವುದನ್ನು ಬಿಟ್ಟು ಎಲ್ಲ ಸಮುದಾಯಗಳು ಪರಿಶಿಷ್ಟ ಸೌಲಭ್ಯ ಪಡೆಯುವ ರಂಗನಾಥ ಮಿಶ್ರಾ ವರದಿಯನ್ನು ಕೂಡಲೆ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಜುಲೈ 1ರಂದು ಡಿಎಸ್‌ಎಸ್ ಮುಖಂಡರಾದ ರವಿ ಓಲೇಕಾರ, ಆನಂದ ಗುರೂಜಿ, ಭರ್ಮಪ್ಪ ಹರಿಜನ, ಪರಮೇಶ್ವರ ನಾಯಕ, ಹನುಮಂತಪ್ಪ ವಡ್ಡರ, ರಾಜು ಗಾಡಿಗೇರ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯಿಂದ ನೂರಾರು ಸಮಾಜ ಮುಖಂಡರು ಬೆಂಗಳೂರಿಗೆ ತೆರಳಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಹಿಂದುಳಿದ ಸಮಾಜಗಳಿಗೆ ಆಗುವ ಅನ್ಯಾಯಗಳ ಕುರಿತು ಆಯೋಗದ ಗಮನ ಸೆಳೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement