ಕರ್ತವ್ಯಲೋಪ: ನೋಟಿಸ್
ಬ್ಯಾಡಗಿ: ಮಕ್ಕಳಿಗೆ ಸಮರ್ಪಕ ಆಹಾರ ಪೂರೈಸದೇ, ಕರ್ತವ್ಯಲೋಪವೆಸಗಿದ್ದ ಅಂಗನವಾಡಿಯ ಇಬ್ಬರು ಕಾರ್ಯಕರ್ತೆಯರಿಗೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಕಾರ್ಯಕರ್ತೆಯರ ವಿರುದ್ಧ ರಾಮಗೊಂಡನಹಳ್ಳಿಯ ಸಾರ್ವಜನಿಕರು ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಫೆ. 25ರಂದು ಪ್ರತಿಭಟನೆ ನಡೆಸಿ, ಅಮಾನತಿಗೆ ಆಗ್ರಹಿಸಿದ್ದರು. ದೂರನ್ನಾಧರಿಸಿ ತನಿಖೆ ನಡೆಸಿದ ಶಿಶು ಅಭಿವೃದ್ಧಿ ಅಧಿಕಾರಿ ಜಿ.ಟಿ. ಶಿರೋಳಕರ ಕಾರ್ಯಕರ್ತೆರಾದ ರತ್ನವ್ವ ಕಾಡಮ್ಮನವರ, ಪ್ರೇಮ ಬಾಗಮ್ಮನವರ ಮೇಲೆ ಸಾರ್ವಜನಿಕರ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ನೋಟಿಸ್ ಜಾರಿಗೊಳಿಸಿದ್ದಾರೆ.