ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿಯಿಂದ ಪತಿ-ಪತ್ನಿ ಸ್ಪರ್ಧೆ

Lingaraj Badiger
Updated On : 2 Mar 2013, 10:50 am

ರಾಣಿಬೆನ್ನೂರು: ಸಂಸಾರದೊಂದಿಗೆ ರಾಜಕೀಯವನ್ನೂ ಹೊಂದಾಣಿಕೆ ಮಾಡಿಕೊಂಡು ಹೋಗಬಹುದು. ಸ್ವಾರ್ಥ ಚಿಂತನೆಯಿದ್ದಲ್ಲಿ ರಾಜಕಾರಣ ಮಾಡದೇ ಯಾವುದಾದರೂ ವ್ಯಾಪಾರ ಮಾಡಲಿ. ಅಭಿವೃದ್ಧಿ ದೃಷ್ಟಿಕೋನವಿದ್ದಲ್ಲಿ ಮಾತ್ರ ರಾಜಕಾರಣಕ್ಕೆ ಬರಲಿ ಹೀಗೆಂದು ಕರೆಕೊಟ್ಟವರು 7ನೇ ವಾರ್ಡಿನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ವೆಂಕಟೇಶ ಏಕಬೋಟೆ. ಅಲ್ಲದೇ ಇವರ ಪತ್ನಿ ವಿಜಯಲಕ್ಷ್ಮೀ ಕೂಡ 16ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ.
ಏಕೈಕ ಅಭ್ಯರ್ಥಿ ಗೆಲವು
ಒಂದೇ ಮನೇಲಿ 2 ಟಿಕೆಟ್ ಅದೂ ಒಂದೇ ಪಕ್ಷದ್ದು, ಹೇಗೆ ಅಂತಿರಾ... ಇದಕ್ಕೆ ಇತಿಹಾಸವಿದೆ. ಕಳೆದ 50 ವರ್ಷಗಳಿಂದಲೂ ಈ ದಂಪತಿಗಳು ಸಿದ್ದೇಶ್ವರ ನಗರ ನಿವಾಸಿಗಳು. ಅಲ್ಲದೇ 45 ವರ್ಷಗಳಿಂದಲೂ ಸಂಘ ಪರಿವಾರದ ಪಕ್ಕಾ ಭಂಟರು. ಅಲ್ಲದೆ 2002-03ನೇ ಸಾಲಿನಲ್ಲಿ ನಗರಸಭೆಗೆ ನಡೆದ ಚುನಾವಣೆಯಲ್ಲಿ 31 ವಾರ್ಡುಗಳಿಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳಲ್ಲಿ 16ನೇ ವಾರ್ಡ್‌ನಿಂದ ವೆಂಕಟೇಶ ಏಕಬೋಟೆ ಮಾತ್ರ ಜಯಿಸಿದ್ದರು. ಅವರೊಂದಿಗೆ ಇದ್ದ ಎಲ್ಲ 30 ಬಿಜೆಪಿ ಅಭ್ಯರ್ಥಿಗಳೂ ನೆಲಕಚ್ಚಿದ್ದರು. ಇದು ಈ ಅಭ್ಯರ್ಥಿಯ ಬಯೋಡಾಟಾ ವಿಸ್ತೃತ ರೂಪ.
ಮತ್ತೆ ಬಿಜೆಪಿ ಅಧಿಕಾರಕ್ಕೆ
2007ರಲ್ಲಿ ಜೆಡಿಯುನಿಂದ ಅಧಿಕಾರಕ್ಕಾಗಿ ಬಂದ ನಾಯಕರು ನಂತರ ಸ್ವಾರ್ಥ ಸಾಧನೆ ಮಾಡಿಕೊಂಡು ಈಗ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಬರುವ ದಿನಗಳಲ್ಲಿ ಮತ್ತೆ ಬಿಜೆಪಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಈ ದಂಪತಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಕೆಜೆಪಿಯಲ್ಲಿ ಗುರುತಿಸಿಕೊಂಡವರು ಜನವಿರೋಧಿ ಠರಾವುಗಳನ್ನು ಮಾಡಿ ಪಕ್ಷದ ಹೆಸರಿಗೆ ಧಕ್ಕೆ ತಂದಿದ್ದಾರೆ. ಅವರಿಗೆ ತಕ್ಕಪಾಠ ಕಲಿಸಲು ಹಾಗೂ ನಗರದ ಸರ್ವತೋಮುಖ ಅಭಿವೃದ್ಧಿಗೆ ತಾವು ಕುಟುಂಬ ಸಮೇತ ಸ್ಪರ್ಧೆಗಿಳಿದಿರುವುದಾಗಿ ವೆಂಕಟೇಶ ಏಕಬೋಟೆ ತಿಳಿಸಿದರು.
ಈ ಬಾರಿ ವಿಜಯಲಕ್ಷ್ಮಿಗೆ ಗೆಲುವು ಖಾತ್ರಿ. ಜನರ ಕಷ್ಟಗಳಿಗೆ ಸ್ಪಂದಿಸುವ ಮಹಿಳೆಗೆ ಜನ ಬೆಂಬಲವಿದೆ ಎಂದು 16ನೇ ವಾರ್ಡಿನ ಮಹಿಳೆ ಕಮಲಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಒಂದೇ ಕುಟುಂಬಕ್ಕೆ 2 ಟಿಕೆಟ್ ಕೊಡುವ ಮೂಲಕ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಜನತೆ ಇದಕ್ಕೆ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
-ಸಾಬಜಾನ್ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement