ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಚಲವಾದಿ ಸಮಾಜ ಸಭೆ

Mainashree
Updated On : 3 Mar 2013, 11:42 am

ಹಾನಗಲ್ಲ: ಚಲವಾದಿ ಸಮಾಜದ ತಾಲೂಕು ಸಮಿತಿ ಸಭೆ ಮಾ. 3ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಅಂಬೇಡ್ಕರ ಭವನದಲ್ಲಿ ನಡೆಯಲಿದೆ. ಹಾನಗಲ್ಲಿನಲ್ಲಿ ಜಿಲ್ಲಾ ಮಟ್ಟದ ಚಲವಾದಿ ಸಮಾಜದ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದ್ದು, ಅದರ ಪೂರ್ವ ತಯಾರಿಕೆಗಾಗಿ ನಡೆಯುವ ಈ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಬಸವರಾಜ, ಪ್ರಧಾನ ಕಾರ್ಯದರ್ಶಿ ಸುಭಾಸ ನಾಟೇಕರ, ಜಿಲ್ಲಾ ಅಧ್ಯಕ್ಷ ಮಾರುತಿ ಚಲುವಾದಿ, ಪದಾಧಿಕಾರಿಗಳಾದ ಮಲ್ಲೇಶಪ್ಪ ಕರ್ಜಗಿ, ಧರ್ಮಣ್ಣ ಚಲುವಾದಿ, ನಾಗರಾಜ ಚಲುವಾದಿ, ಮಂಜುನಾಥ ಕಾಟೇನಹಳ್ಳಿ, ನಿಂಗಪ್ಪ ಮೈಲಾರಪ್ಪ ಕಾಳೇರ, ಮಂಜುನಾಥ ಹಾಳಗಲ್ಲಾಪೂರ, ರಾಮಣ್ಣ ಕಾಳೇರ, ಪರಸಪ್ಪ ಎಲಿವಾಳ, ಅಶೋಕ ಕಾಳೆ, ಗಂಗಾಧರ ಕುಂದೂರ ಸಭೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡುವರು. ತಾಲೂಕಿನ ಚಲವಾದಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡಬೇಕೆಂದು ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಕಾಳೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement