ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಭಿವೃದ್ಧಿ: ವಿಪಕ್ಷಗಳ ಟೀಕೆ ಸರಿಯಲ್ಲ

Lingaraj Badiger
Updated On : 4 Mar 2013, 12:17 pm

ಶಿಗ್ಗಾಂವಿ: ಸುಮಾರು 60 ವರ್ಷಗಳ ಕಾಲ ಆಡಳಿತ ನಡೆಸಿದರೂ ಅಭಿವೃದ್ಧಿ ಕಾಣದ ರಾಜ್ಯವನ್ನು ಬಿಜೆಪಿ ಅಭಿವೃದ್ಧಿ ಮಾಡುವ ಮೂಲಕ ಜನಮನವನ್ನು ಗೆದ್ದಿದೆ. ಅದನ್ನು ಸಹಿಸಲಾರದ ಇತರ ಪಕ್ಷಗಳು ಇಲ್ಲ ಸಲ್ಲದ ಟೀಕೆ ಮಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನುಡಿದರು.
ಭಾನುವಾರ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂಗವಾಗಿ ರೋಡ್ ಶೋ ನಡೆಸಿ ಮಾತನಾಡಿ, ವಿಶೇಷ ಅನುದಾನದಡಿಯಲ್ಲಿ ರಾಜ್ಯದಲ್ಲಿ ಪಟ್ಟಣ, ನಗರಗಳ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಪ್ರಥಮ ಆದ್ಯತೆ ನೀಡುವ ಜೊತೆಗೆ ವಿಶೇಷ ಯೋಜನೆಯಡಿ ತಲಾ ರು. 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಪುರಸಭೆಗೆ ರು. 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಸ್ಥಳೀಯ ಚುನಾವಣೆಯ ಪ್ರಕ್ರಿಯೆ ಮುಗಿದ ನಂತರ ಪಟ್ಟಣದ ಎಲ್ಲ ಓಣಿಯ ರಸ್ತೆಗಳು ಕಾಂಕ್ರೀಟ್ ರಸ್ತೆ ಮಾಡಲಾಗುವುದು ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ರು. 13 ಕೋಟಿ ಅನುದಾನದಲ್ಲಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಒಂದು ತಿಂಗಳಲ್ಲಿ ಕೆಲಸ ಸಂಪೂರ್ಣ ಮುಕ್ತಾಯಗೊಂಡು ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಈ ಸಂದರ್ಭ ವಿಪ ಸದಸ್ಯ ಸೋಮಣ್ಣ ಬೇವಿನಮರದ, ತಾಪಂ ಅಧ್ಯಕ್ಷೆ ಉಷಾ ಬಿಳಿಕುದರಿ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣವರ, ಸರೋಜಮ್ಮ ಆಡಿನ, ತಾಪಂ ಸದಸ್ಯ ನಿಂಗಪ್ಪ ಹರಿಜನ, ಸುಜಾತಾ ಕಲಕಟ್ಟಿ, ಲಕ್ಷ್ಮೀ ತೋಟದ, ಉಮಾ ಡವಗಿ, ನಿಂಗಣ್ಣ ಜವಳಿ, ವೀರನಗೌಡ ಪಾಟೀಲ, ಜಯಣ್ಣ ಹೆಸರೂರ, ರಾಮು ಪೂಜಾರ, ಆನಂದ ದಾನಿ, ಬಸಣ್ಣ ಹೆಸರೂರ, ಎಲ್ಲ ವಾರ್ಡ್ ಅಭ್ಯರ್ಥಿಗಳು ಮತ ಯಾಚಿಸಿದರು.
--
ಕಾಂಗ್ರೆಸ್ ನಾಯಕರಿಂದ ಬಿರುಸಿನ ಪ್ರಚಾರ

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ.3
ಒಂದನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಕಾಶಿನಾಥ ರಾಯ್ಕರ್ ಪ್ರಚಾರಾರ್ಥ ಒಂದನೇ ವಾರ್ಡಿನ ಗುಡ್ಡದ ಓಣಿ, ಮೈಲಾರದೇವರ ಓಣಿ, ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಕಾಂಗ್ರೆಸ್ ನಾಯಕರು ಬಿರುಸಿನ ಪ್ರಚಾರ ಕೈಗೊಂಡು, ಮನೆ-ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಮತ ಪ್ರಚಾರ ಆರಂಭಿಸಿದ ಮಾಜಿ ಜಿಪಂ ಉಪಾಧ್ಯಕ್ಷ ಎನ್.ಸಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಕಾಶಿನಾಥ ರಾಯ್ಕರವರಿಗೆ ಬೆಂಬಲಿಸಿ, ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಷ್ಟ್ರೀಯ ಪಕ್ಷಗಳ ಬಗ್ಗೆ ತೀಕ್ಷ್ಮವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಟಿಕೆಟ್ ಕೇಳುವುದು ನಾಚೀಕೆಗೇಡು: 10 ವರ್ಷ ಕಾಲ ಪಕ್ಷದ ಅಧಿಕಾರ, ಹುದ್ದೆ ಅನುಭವಿಸಿ ಪಕ್ಷದ ಟೆಕೆಟ್ ವಂಚಿತರಾಗಿ ಹತಾಶೆ ಮನೋಭಾವದಿಂದ ಮಾತನಾಡುವುದು ಸರಿಯಲ್ಲ. 2 ಬಾರಿ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತ ಪ್ರತಿನಿಧಿಯಾಗಿ ಅಧಿಕಾರ ನಿರ್ವಹಿಸಿ, ಮತ್ತೆ ಪುರಸಭೆ ಟಿಕೆಟ್ ಕೇಳುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಪ್ರದೀಪಕುಮಾರ ಗಿರಡ್ಡಿ ಮಾತನಾಡಿ, ಪುರಸಭಾ ಚುನಾವಣೆಗೆ ಬಹುತೇಕ ಜನರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಕಾಶಿನಾಥ ರಾಯ್ಕರ, ಹನುಮರಡ್ಡಿ ನಡುವಿನಮನಿ, ಗುಡ್ಡಪ್ಪ ಜಲಧಿ, ಪ್ರಕಾಶ ಬಂಕಣ್ಣವರ, ಸುಧೀರ ಲಮಾಣಿ, ಶಬ್ಬೀರಹ್ಮದ್ ಲಕ್ಷ್ಮೇಶ್ವರ, ದುಕಾನದಾರ, ಹನಮಂತಪ್ಪ ಜವಳಗಟ್ಟಿ, ರುದ್ರಪ್ಪ ಸಿಂಧೂರ, ಕೃಷ್ಣ ಪಾಟೀಲ, ಚಂದನ ಚವ್ಹಾಣ ಹಾಗೂ ವಾರ್ಡಿನ ಮತದಾರರು ಕಾಂಗ್ರೆಸ್ ಕಾರ್ಯಕರ್ತರು ಮತ ಯಾಚನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement