ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಹೆಗಡೆ ಪ್ರವಾಸ

Lingaraj Badiger
Updated On : 4 Mar 2013, 12:18 pm

ಹಾವೇರಿ: ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಮಾ. 4ರಂದು ಬೆಳಗ್ಗೆ ಹಾವೇರಿಗೆ ಆಗಮಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಲ್ಲದೇ ಬೆಳಗ್ಗೆ 11 ಗಂಟೆಗೆ ಇಲ್ಲಿನ ಹುತಾತ್ಮ ಮೈಲಾರ ಮಹಾದೇವಪ್ಪ ಸರ್ಕಲ್‌ನಲ್ಲಿ ಅಭ್ಯರ್ಥಿಗಳಿಗೆ ಹಾಗೂ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಇಂದು ಕಾಂತೇಶ ಜಾತ್ರೆ
ಬ್ಯಾಡಗಿ: ತಾಲೂಕಿನ ಐತಿಹಾಸಿಕ ಕ್ಷೇತ್ರವಾದ ಕದರಮಂಡಲಗಿ ಕಾಂತೇಶ (ಆಂಜನೇಯ)ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಾ. 4ರಂದು ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದೊಡ್ಡತೇರಿನಲ್ಲಿ ಕಾಂತೇಶ್ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಕಲ ವಾದ್ಯ-ವೈಭವಗಳೊಂದಿಗೆ ಗ್ರಾಮದೆಲ್ಲೆಡೆ ಮೆರವಣಿಗೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಜಾತ್ರೆಗೆ ಬಂದು ಹೋಗುವ ಜನರ ಅನುಕೂಲಕ್ಕಾಗಿ ರಾಣಿಬೆನ್ನೂರು, ಬ್ಯಾಡಗಿ, ಇನ್ನಿತರ ಕಡೆಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕಲ್ಪಿಸಿದೆ.
ಇಂದಿನಿಂದ ಜನಜಾಗೃತಿ
ಹಾವೇರಿ: ಹಾವೇರಿ ಜಿಲ್ಲಾ ವಾರ್ತಾ ಕಚೇರಿಯ ಕ್ಷೇತ್ರ ಪ್ರಚಾರ ಘಟಕದಿಂದ ಹಿರೇಕೆರೂರು ತಾಲೂಕಿನ ಆಯ್ದ 20 ಗ್ರಾಮಗಳಲ್ಲಿ ಮಾ. 4ರಿಂದ 8ರ ವರೆಗೆ ಹಾಗೂ 11ರಿಂದ 15 ಒಟ್ಟು 10 ದಿನಗಳ ಕಾಲ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಜಾಗೃತಿಗಾಗಿ ಪ್ರಚಾರ ಕಾರ್ಯಕ್ರಮಗಳು ಜರುಗಲಿವೆ. ಪ್ರಚಾರ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಂಚಾರಿ ವಸ್ತುಪ್ರದರ್ಶನ ವಾಹನದಿಂದ ವಸ್ತು ಪ್ರದರ್ಶನ, ವಿಡಿಯೋ ಚಿತ್ರಪ್ರದರ್ಶನ ಮತ್ತು ವಿವಿಧ ಕಲಾವಿದರ ತಂಡಗಳಿಂದ ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆ. 4ರಿಂದ 8ರ ವರೆಗೆ ಸವಣೂರು ತಾಲೂಕು ಹುರಳಿಕುಪ್ಪಿ ಗ್ರಾಮದ ವೀರೇಶ ಸಂಕಿನಮಠ ಸಂಗಡಿಗರಿಂದ ಬೀದಿ ನಾಟಕ ಮತ್ತು 11ರಿಂದ 15ರ ವರೆಗೆ ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ಹನುಮಂತಪ್ಪ ಧಾರವಾಡ ಹಾಗೂ ತಂಡದಿಂದ ಜಾನಪದ ಕಾರ್ಯಕ್ರಮ ಜರುಗಲಿವೆ. ಪ್ರಚಾರ ಕಾರ್ಯಕ್ರಮಕ್ಕಾಗಿ ಪ್ರತಿದಿನ ಎರಡು ಗ್ರಾಮಗಳಂತೆ ಒಟ್ಟು 10 ದಿನಗಳವರೆಗೆ ಹಿರೇಕೆರೂರು ತಾಲೂಕಿನ ಬತ್ತಿಕೊಪ್ಪ, ನೇಶ್ವಿ, ವಡೇಯನಪುರ, ಅರಳೀಕಟ್ಟಿ, ಬಾಳಂಬೀಡ, ಬುರಡಿಕಟ್ಟಿ, ರಾಮತೀರ್ಥ, ಹಿರೇಮೊರಬ, ದೊಡ್ಡಗುಬ್ಬಿ, ಮಕರಿ, ದಾಸನಕೊಪ್ಪ, ಸಾತೇನಹಳ್ಳಿ, ಯೋಗಿಕೊಪ್ಪ, ಭೋಗಾವಿ, ಆರಿಕಟ್ಟಿ, ಡಮ್ಮಿನಾಳ, ಗೋಡಚಿಕೊಂಡ, ಧೂಪದಹಳ್ಳಿ, ಹಾದ್ರಿಹಳ್ಳಿ, ಹಾಗೂ ಆಲದಕಟ್ಟಿ ಗ್ರಾಮಗಳಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮಗಳು ಜರುಗುವವು ಎಂದು ಜಿಲ್ಲಾ ವಾರ್ತಾ ಕಚೇರಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement