ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಒಗ್ಗಟ್ಟಿನಿಂದ ಧರ್ಮ ಉದ್ಧಾರ: ಗೊಲ್ಲರ

Lingaraj Badiger
Updated On : 4 Mar 2013, 12:29 pm

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.3
ದುಷ್ಟ ಶಕ್ತಿಗಳು ಧರ್ಮವನ್ನು ಒಡೆದು ಆಳುತ್ತಿವೆ. ಧರ್ಮವೆಂದರೆ ಸೂಜಿ ಇದ್ದಂತೆ, ಜಾತಿ ಎಂದರೆ ಕತ್ತರಿ ಇದ್ದ ಹಾಗೆ ಬಟ್ಟೆ ಹರಿದು ಇಬ್ಬಾಗವಾದದ್ದನ್ನು ಸೂಜಿ ಹೊಲಿಗೆ ಮುಖಾಂತರ ಕೂಡಿಸುತ್ತದೆ. ಹೀಗೆ ಮಾನವರು ಒಡೆದ ಜಾತಿಯನ್ನು ಸೂಜಿಯಂತೆ ಕೂಡಿಸುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಧರ್ಮ ಉದ್ಧಾರವಾಗುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಗೌಡ ಗೊಲ್ಲರ ನುಡಿದರು.
ಸ್ಥಳೀಯ ಸಿಂದಗಿಮಠದಲ್ಲಿ ಪ್ರಭುಗೌಡರ, ಸಿದ್ದಮ್ಮನವರ, ಅಕ್ಕಿ, ಹಾವಿನಾಳ ಆಶ್ರಯದಲ್ಲಿ ದತ್ತಿ ನಿಧಿ ಸಮಾರಂಭದಲ್ಲಿ ದತ್ತಿ ಉಪನ್ಯಾಸ ನೀಡಿದರು.
ಪ್ರಸ್ತುತ ದಿನಗಳಲ್ಲಿ ಧರ್ಮವನ್ನೇ ರಾಜಕಾರಣದ ಬಂಡವಾಳವಾಗಿಸಿಕೊಂಡ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಜಾಗೃತ ಮನಸ್ಸುಗಳು ತಿರಸ್ಕರಿಸಿ ಅಭಿವೃದ್ಧಿಪರ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು. ದತ್ತಿದಾನಿಗಳನ್ನು ಆರ್.ಸಿ. ನಂದಿಹಳ್ಳಿ ಪರಿಚಯಿಸಿದರು. ಅತಿಥಿಗಳಾಗಿ ಬಿ. ಬಸವರಾಜಪ್ಪ, ಎಸ್.ಬಿ. ಮಸಲವಾಡ ಆಗಮಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ದೇಸಳ್ಳಿ ನಿರ್ವಹಿಸಿದರು. ಎಸ್.ಎನ್. ದೊಡ್ಡಗೌಡರ ಸ್ವಾಗತಿಸಿದರು. ಜಿ.ಎನ್. ಜಾವೂರ ವಂದಿಸಿದರು. ಸಾಹಿತಿ ಗಂಗಾಧರ ನಂದಿ, ಮಲ್ಲಾಡದ, ಸಿ.ಎಸ್. ಮರಳೀಹಳ್ಳಿ, ವಿ.ಎನ್. ಹೂಗಾರ, ಎಸ್.ವಿ. ಚಿಟ್ಟಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement