ಕಾಂಗ್ರೆಸ್ನಿಂದ ಅಭಿವೃದ್ಧಿ
ಶಿಗ್ಗಾಂವಿ: ಸಾಮಾಜಿಕ ನ್ಯಾಯ ತತ್ವದಡಿ ಎಲ್ಲ ಸಮುದಾಯವನ್ನು ಸಮನಾಗಿ ಕಾಣುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಸ್ಥಳೀಯ 17ನೇ ವಾರ್ಡಿನ ಅಭ್ಯರ್ಥಿ ನನ್ನಿಮಾ ಬಿಸ್ತಿ ಮತಯಾಚನೆ ಸಂದರ್ಭ ಹೇಳಿದರು.
ಪಟ್ಟಣದ ಪುರಸಭೆ 17ನೇ ವಾರ್ಡ್ನಲ್ಲಿ ಚುನಾವಣೆ ಪ್ರಚಾರ ನಡೆಸಿದ ಬಳಿಕ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ, ಅನಾಚಾರ ಹಾಗೂ ಅಧಿಕಾರಕ್ಕಾಗಿ ಕಚ್ಚಾಡುವ ಮೂಲಕ ಅಭಿವೃದ್ಧಿ ಮರೆತಿದ್ದಾರೆ ಹೀಗಾಗಿ ಜನ ವಿರೋಧಿ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳು ಜನಮನದಿಂದ ದೂರಾಗುತ್ತಿವೆ ಎಂದರು. ಈ ಸಂದರ್ಭ ಸುಲೇಖಾ ಅತ್ಸರ, ಮಮತಾಜ ನನ್ನಿಮಾಹನೀಫ, ಸಂಜಿದಾಬಿ, ಹಸೀನಾ, ಶ್ರೀದೇವಿ ಈಳಗೇರ, ಜಯಶ್ರೀ ಚಿಕ್ಕಮಠ ಮತ ಯಾಚಿಸಿದರು.