ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರಾಮಾಣಿಕತೆ ಮೆರೆದ ಆರೋಗ್ಯ ರಕ್ಷಾ ಸಿಬ್ಬಂದಿ

Lingaraj Badiger
Updated On : 4 Mar 2013, 12:29 pm

ಹಾವೇರಿ: ಮದ್ಯದ ಅಮಲಿನಲ್ಲಿ ಆಯತಪ್ಪಿ ಬಿದ್ದು ಬೈಕ್ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಹಾವೇರಿ ಬೈಪಾಸ್ ಬಳಿ ಜರುಗಿದೆ. ಗಾಯಾಳುವನ್ನು ಹಾವನೂರ ಗ್ರಾಮದ ನಿಂಗಪ್ಪ ಹಾಂವಶಿ (35) ಎಂದು ಗುರುತಿಸಲಾಗಿದೆ.
ಈತ ಪ್ರಜಾಹೀನ ಸ್ಥಿತಿಯಲ್ಲಿದ್ದಾಗ ಸಾರ್ವಜನಿಕರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬಂದು ಪರೀಕ್ಷಿಸಿದಾಗ ಆತನ ಬಳಿ ಕೆಲವು ದಾಖಲಾತಿಗಳು ಹಾಗೂ ರು. 41 ಸಾವಿರ ನಗದು ಸಿಕ್ಕಿತ್ತು. ತಕ್ಷಣ ಗಾಯಾಳುವನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಆತ ಎಚ್ಚರಗೊಂಡ ಬಳಿಕ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಹಣ ಹಾಗೂ ದಾಖಲೆಗಳನ್ನು ಮರಳಿಸಲಾಯಿತು.
ವಿಶ್ವಾಸಪೂರ್ಣವಾಗಿ ಕಾರ್ಯ ನಿರ್ವಹಿಸಿದ 108 ಆರೋಗ್ಯ ರಕ್ಷಾ ಕವಚದ ಸಿಬ್ಬಂದಿ ಸಿದ್ದಲಿಂಗೇಶ ಹಾಗೂ ಫಕ್ಕೀರಗೌಡ, ಪೊಲೀಸ್ ಸಿಬ್ಬಂದಿ ದೊಡ್ಡಮನಿ ಅವರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement