ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಪಾಟೀಲ್
ಬ್ಯಾಡಗಿ: ಬಡ ಜನರ ಹಿತ ಕಾಪಾಡುವಲ್ಲಿ ರೂಪಿಸಿರುವ ಯೋಜನೆಗಳು ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲಿದೆ ಎಂದು ಮುಖಂಡ ಎಸ್.ಆರ್. ಪಾಟೀಲ ಹೇಳಿದರು.
ಅವರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದರು. ಬದ್ಧತೆ ಮರೆತಿರುವ ಬಿಜೆಪಿ, ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಜೆಡಿಎಸ್ ಹಾಗೂ ಕೇವಲ ವೈಯಕ್ತಿಕ ಪ್ರತಿಷ್ಠೆಗಾಗಿ ಹುಟ್ಟಿಕೊಂಡಿರುವ ದಿಕ್ಕು ದೆಸೆಯಿಲ್ಲದ ಕೆಜೆಪಿಯಿಂದ ಈ ರಾಜ್ಯದ ಜನರು ಏನನ್ನು ನಿರೀಕ್ಷಿಸಲು ಸಾಧ್ಯವೆಂದು ಪ್ರಶ್ನಿಸಿದ ಅವರು, ಅಭಿವೃದ್ಧಿ ಪರ ಹಾಗೂ ಸುಭದ್ರ ಸರ್ಕಾರಕ್ಕೆ ಕಾಂಗ್ರೆಸ್‌ನ್ನು ಬೆಂಬಲಿಸುವಂತೆ ಕರೆ ನೀಡಿದರು.
ರಾಹುಲ್ ಗಾಂಧಿಯವರ ಆಶೋತ್ತರಗಳನ್ನು ಈಡೇರಿಸಲು ಯುವ ಸಮುದಾಯ ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶ್ರೀರಕ್ಷೆಯಾಗಿದ್ದು, ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದು, ಬ್ಯಾಡಗಿಯನ್ನು ರಾಜ್ಯದಲ್ಲಿಯೇ ಮಾದರಿ ಪಟ್ಟಣವನ್ನಾಗಿಸುವ ಗುರಿ ಹೊಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಹಲವರು ಬೇರೆ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹುಸೇನಸಾಬ್ ದೊಡ್ಮನಿ, ಲಿಂಗಪ್ಪ ಕೊಂಬಳಿ, ರಮೇಶ ಸುತ್ತಕೋಟಿ, ರಾಜಾಭಕ್ಷ ಕೂರಗುಂದ, ನಿಸ್ಸಾರ ಅಹ್ಮದ್ ಹಾವನೂರ, ಫಕ್ಕೀರಪ್ಪ ಬೈರಾಪುರ, ಚಂದ್ರಶೇಖರ ಛತ್ರದ ಉಪಸ್ಥಿತರಿದ್ದರು.