ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮುಂಬೈನಲ್ಲಿ ವಿವಿಧ ಕಲಾಕೃತಿ ಪ್ರದರ್ಶನ

Lingaraj Badiger
Updated On : 4 Mar 2013, 12:28 pm

ಹಾವೇರಿ: ದೇಶದ ಆಯ್ದ ಪ್ರತಿಭಾವಂತ ಕಲಾವಿದರ ಕಲಾಕೃತಿಗಳ ಸಮೂಹ ಚಿತ್ರಕಲಾ ಪ್ರದರ್ಶನ ಮುಂಬಯಿ ನಗರದ ಎಕೆಎಸ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಆರಭವಾಗಿದ್ದು, ಮಾ. 6ರವರೆಗೆ ಜರುಗಲಿವೆ.
ಜಿಲ್ಲೆಯ ಯುವ ಪ್ರತಿಭಾವಂತ ಕಲಾವಿದರಾದ ಬ್ಯಾಡಗಿ ತಾಲೂಕು ಕಲ್ಲೇದೇವರು ಗ್ರಾಮದ ಕುಮಾರ ಕಾಟೇನಹಳ್ಳಿ, ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಕಲಾವಿದ ಕರಿಯಪ್ಪ ಹಂಚಿನಮನಿ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಇದರಲ್ಲಿ ಹುಬ್ಬಳ್ಳಿಯ ಶ್ಯಾಮಲಾ ಗುರುಪ್ರಸಾದ, ಆಶಿಷ್ ಕುಷ್ವಾಹ, ಎಸ್.ಸಿ. ಪಾಟೀಲ, ರತನ್ ಪ್ರಿಯಾಕಾಂತ, ಬಿಪ್ಲಬ್ ರಿಜ್, ಶಾಹಿದ್ ಪಾಶಾ, ಅಮೋಲ್ ಸುಲೆ, ರಮೇಶ ತಾಗದ, ಸಂತೋಷಕುಮಾರ, ಆಸ್ಮಿಕಾ ಸಿಹಾರೆ, ಗಣೇಶ್ ಗೊರಖನಾಥ ಗುಲೆ, ಡಾ. ಮೋಹನ ಪಂಚಾಳ, ಜಿತೆನ ಸಾಹು, ಅಜಯಕುಮಾರ ಝಾ ಸೇರಿದಂತೆ ಒಟ್ಟು 16 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಕಲಾಕೃತಿ-ಛಾಯಾಚಿತ್ರಗಳ ಮೂಲಕ ಚಿರಪರಿಚಿತರಾಗಿರುವ ಕುಮಾರ ಕಾಟೇನಹಳ್ಳಿ, ಅವರ ಶಿಷ್ಯ ಕರಿಯಪ್ಪ ಹಂಚಿನಮನಿ, ಇವರಿಬ್ಬರ ಕಲಾಕೃತಿಗಳು ಕರ್ನಾಟಕ ಗ್ರಾಮೀಣ ಸೊಗಡಿನ ಕಲಾಕೃತಿಗಳು, ಕುಮಾರ ಕಾಟೇನಹಳ್ಳಿ, ಕರಿಯಪ್ಪ ಹಂಚಿನಮನಿ ಅಪರೂಪದ ಅಪ್ಪಟ ದೇಶಿ ಕಲಾವಿದರು. ಕರಿಯಪ್ಪ ತನ್ನ ಕಲೆಯ ಮೂಲಕ ದೇಶದ ಗಡಿ  ದಾಟಿ ವಿದೇಶದಲ್ಲಿ, ಅದರಲ್ಲಿಯೂ ಒಬ್ಬ ಪೊಲೀಸ್ ಕಾನ್ಸೆಬಲ್ ಆಗಿದ್ದುಕೊಂಡು ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಇವರ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠ ಚೇತನಸಿಂಗ್ ರಾಠೋರ್ ಮತ್ತು ಇಲಾಖೆ ಅಧಿಕಾರಿ ಮತ್ತು ಸಹೋದ್ಯೋಗಿಗಳು, ಜಿಲ್ಲೆಯ ಸಾಹಿತಿ ಮತ್ತು ಕಲಾವಿದರ ಬಳಗ ಪ್ರೋತ್ಸಾಹಿಸಿ, ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement