ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೌಲಭ್ಯಕ್ಕೆ ಸಂಘಟಿತರಾಗಿ

Lingaraj Badiger
Updated On : 4 Mar 2013, 12:28 pm

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ.3
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅಂಗವಿಕಲರಿಗಾಗಿ ಯಾವುದೇ ಸೌಲಭ್ಯ ಇಲ್ಲ. ಸರ್ಕಾರಿ ನೌಕರಿಯಲ್ಲಿ ಬಡ್ತಿ ಇಲ್ಲದೆ ಅಂಗವಿಕಲರಿಗೆ ಮಿಸಲಾತಿ ಇಲ್ಲದಿರುವುದು ವಿಷಾದನೀಯ. ದೇಶದಲ್ಲಿ ಶೇ. 5ರಷ್ಟು ಅಂವಿಕಲರಿದ್ದರೂ ಈ ಸೌಲಭ್ಯಕ್ಕಾಗಿ ಸಂಘಟಿತರಾಗಬೇಕು ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ರೇಣುಕಾರಾಧ್ಯ ಕರೆ ನೀಡಿದರು.
ಇಲ್ಲಿನ ಗುರುಭವನದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಮ್ಮೇಳನ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅಂಗವಿಕಲರಿಗೆ ಮಾನವೀಯ ಅಂತಃಕರಣ ಬೇಕಿದೆ. ಮಾನವೀಯ ನೆಲೆಯಲ್ಲಿ ಜೀವನ ನಡೆಸುವಂತಾಗಬೇಕು. ಗ್ರೂಪ್ ಎ ಹುದ್ದೆಗಳಿಗೆ ಸರ್ಕಾರಿ ನೌಕರಿಯಲ್ಲಿ ಅಂಗವಿಕಲರಿಗೆ ಮೀಸಲಾತಿ ದೊರೆತಿರುವುದು ಸಂಘಟನೆಯ ಹೋರಾಟದ ಫಲವಾಗಿದೆ. ದೇಶದಲ್ಲಿ ಬಡತನ, ಅಪೌಷ್ಟಿಕತೆ, ಸುಧಾರಿತ ವೈದ್ಯಕೀಯ ವ್ಯವಸ್ಥೆ ಇಲ್ಲದಿರುವುದು ನರಳುವಂತಾಗಿದೆ. ಸರ್ಕಾರ ಹೆಚ್ಚಿನ ಸೌಲಭ್ಯ, ನೆರವು ಕಲ್ಪಿಸಬೇಕು. ಸಂಘಟನೆ ಚಲನಶೀಲವಾಗಿದೆ ಎಂದರು. ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ. ಮೂಲೇರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಟಿ. ಗಿರಿಯಪ್ಪ, ಕ್ಷೇತ್ರ ಸಮನ್ವಾಯಾಧಿಕಾರಿ ಎನ್. ಸುರೇಶಕುಮಾರ, ಉಪ ಸಮನ್ವಾಯಾಧಿಕಾರಿ ಜಿ.ಕೆ. ಸುಳಗನ್ನಿ, ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ. ನಿಂಗನಗೌಡ್ರ, ಚಂದ್ರಶೇಖರ ಮಾಳಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಎಂ.ಆರ್. ಮಕಾಂದಾರ, ತಾಲೂಕಾಧ್ಯಕ್ಷ ಬಿ.ಪಿ. ಬಿದರಿ, ರಾಜ್ಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಲ್ಲಾಭಕ್ಷ ಹರಿಹರ, ಶಿಕ್ಷಕರ ಸಂಘದ ಚೇರಮನ್ ಎಸ್.ಎಂ. ಕ್ವಾರಡಿ, ಉಪಾಧ್ಯಕ್ಷ ವಿ.ಎಂ. ಗೊಂದಿ, ಎಸ್.ಆರ್. ಅಣ್ಣಯ್ಯನವರ, ಸಿ.ಎಸ್. ಹಾರ್ನಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಆರ್.ಡಿ. ಕಿಟ್ಟದ ಪ್ರಾರ್ಥಿಸಿದರು. ವಿ.ಬಿ. ಆಲದಕಟ್ಟಿ ಸ್ವಾಗತಿಸಿದರು. ಪ್ರೊ. ವಿ.ಸಿ. ಏಕಬೋಟೆ ಪ್ರಾಸ್ತಾವಿಕ ಮಾತನಾಡಿದರು. ಯು.ಎಸ್. ಮರದ ನಿರ್ವಹಿಸಿದರು. ಕೆ.ಜಿ. ಚೆನ್ನಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement