ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಲ್ಯುಮಿನಿ ಶುಲ್ಕ ರದ್ದಾಗಲಿ: ಎಸ್‌ಎಫ್‌ಐ

Lingaraj Badiger
Updated On : 5 Mar 2013, 11:36 am

ಬ್ಯಾಡಗಿ: ಪದವಿ ವಿದ್ಯಾರ್ಥಿಗಳ ಹೆಚ್ಚುವರಿ ಅಲ್ಯುಮಿನಿ ಶುಲ್ಕ ರದ್ದತಿಗೆ ಆಗ್ರಹಿಸಿ ತಾಲೂಕು ಎಸ್‌ಎಫ್‌ಐ ಕಾರ್ಯಕರ್ತರು ಇಲ್ಲಿನ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣೆಗೆ ತಾಲೂಕು ಕಚೇರಿಯನ್ನು ತಲುಪಿತು.  ಎಸ್‌ಎಫ್‌ಐ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿ, ಪರೀಕ್ಷಾ ಶುಲ್ಕದ ಜತೆಗೆ ಅಲ್ಯುಮಿನಿ ಎಂಬ ಹೆಚ್ಚುವರಿ ಶುಲ್ಕವನ್ನು ಸೇರಿಸಿ ಪದವಿ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಕೂಡಲೇ ಅಲ್ಯುಮಿನಿ ಹೆಚ್ಚುವರಿ ಶುಲ್ಕವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಮಾತನಾಡಿ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಇಲ್ಲ ಸಲ್ಲದ ನೆಪಗಳನ್ನು ಮುಂದೊಡ್ಡಿ ಸದ್ದಿಲ್ಲದಂತೆ ಬಡ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಹಾಕುತ್ತಿದೆ. ಸರ್ಕಾರ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಕೊಟ್ಟ ಭರವಸೆಗಳೆಲ್ಲ ಎಲ್ಲಿ ಹೋದವು? ಇಂತಹ ವ್ಯವಸ್ಥೆಗಳಿಂದ ಶೈಕ್ಷಣಿಕ ಪ್ರಗತಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಕಾರ್ಯದರ್ಶಿ ವಸಂತಕುಮಾರ, ಬಿ. ರಾಘವೇಂದ್ರ ಕಿತ್ತೂರ, ಬಸವ ರಾಜ ದೊಡ್ಡಬಾತಿ, ವಿರೂಪಾಕ್ಷಪ್ಪ ಕನಕೆರಿ, ರೂಪಾ ದ್ಯಾಮನಗೌಡ್ರ, ಅಮೃತಾ ಹೊನ್ನಾಳಿ, ದೀಪಾ ದ್ಯಾಮನಗೌಡ್ರ, ಪ್ರವೀಣ ಬಾರ್ಕಿ, ಪ್ರವೀಣ ಬನ್ನಿಹಟ್ಟಿ, ಮಮತಾ ಬೆನ್ನೂರ, ಸುನೀಲ್ ಸುತಾರ, ಆಸ್ಮಾ ಕೌಸರ ಅಗಡಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement