ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪಕ್ಷಗಳನ್ನು ಬೆಂಬಲಿಸಿದರೆ ವಜಾ

Lingaraj Badiger
Updated On : 5 Mar 2013, 11:36 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 4
ಹಾವೇರಿ ನಗರಸಭೆ ಚುನಾವಣೆಯಲ್ಲಿ ನಗರ ಸುಧಾರಣಾ ಸಮಿತಿಯಲ್ಲಿ ಗುರುತಿಸಿಕೊಂಡ ಅಭ್ಯರ್ಥಿಗಳು ತಮ್ಮ ಪರ ಪ್ರಚಾರ ಮಾಡದೆ ರಾಜಕೀಯ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳಿಕೆ ನೀಡುತ್ತಿದ್ದು, ಅಂಥವರನ್ನು ಸಮಿತಿಯಿಂದ ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಗುತ್ತದೆ ಎಂದು ನಗರ ಸುಧಾರಣಾ ಸಮಿತಿ ಅಧ್ಯಕ್ಷ ಡಾ೤ ಜೆ.ಆರ್. ಗುಡಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಣ, ಹೆಂಡದ ಆಮಿಷ ತೋರಿ ಮತದಾರರನ್ನು ಭ್ರಷ್ಟರಾಗಿಸುವ ಕುತಂತ್ರ ನಡೆಸಿದ್ದಾರೆ. ಪಕ್ಷಗಳು ಹಾಗೂ ಮುಖಂಡರು ಭ್ರಷ್ಟತೆಯಲ್ಲಿ ತೊಡಗಿಸಿಕೊಂಡು ಜನತೆಗೆ ಮುಖ ತೋರಿಸುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ವಾಮಮಾರ್ಗ ಬಳಸಿ ಚುನಾವಣೆಯಲ್ಲಿ ಗೆಲ್ಲಲೆತ್ನಿಸುತ್ತಿದ್ದಾರೆ ಎಂದು ದೂರಿದರು. ನಗರದ ಅಭಿವೃದ್ಧಿಯ ಕನಸಿನೊಂದಿಗೆ ಚುನಾವಣಾ ಕಣಕ್ಕೆ ಇಳಿದಿರುವ ನಗರ ಸುಧಾರಣಾ ಸಮಿತಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಪ್ರಸ್ತುತ ನಗರಸಭೆ ಆಡಳಿತ ಹಿಡಿಯುವಷ್ಟರ ಮಟ್ಟಿಗೆ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಸಮಿತಿ ಸದಸ್ಯರ ಬೆಂಬಲವಿಲ್ಲದೆ ಆಡಳಿತ ನಡೆಸುವುದಂತೂ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಆಡಳಿತ ಮಂಡಳಿ ನಗರದ ಅಭಿವೃದ್ಧಿಯನ್ನು ಕಡೆಗಣಿಸಿದೆ. ಸರ್ಕಾರದಿಂದ ಬಂದ ರು. 102 ಕೋಟಿ ದುರುಪಯೋಗ ಮಾಡಿಕೊಂಡ ಪರಿಣಾಮ ನಗರ ಇಂದಿಗೂ ಕೊಳಚೆಯಾಗಿಯೇ ಗೋಚರಿಸುತ್ತದೆ. ದುರಾಡಳಿತ ಕೊನೆಯಾಗಬೇಕು, ನಗರದ ಅಭಿವೃದ್ಧಿಗೆ ಶ್ರಮಿಸುವ ಸದಸ್ಯರನ್ನು ಆಯ್ಕೆ ಮಾಡಿ ಬದಲಾವಣೆ ತರಬೇಕೆಂಬ ಅಭಿಪ್ರಾಯ ಜನರಲ್ಲಿ ಜಾಗೃತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ೤ ಎಸ್.ಜಿ. ಪಂಡಿತ, ಗಣೇಶ ಹೂಗಾರ, ಎಂ.ಎಸ್. ಕೋರಿಶೆಟ್ಟರ, ಟಿ.ಬಿ. ಕುಲಕರ್ಣಿ, ಬಸವರಾಜ ಮಾಸೂರ, ಜಯಂತಿಲಾಲ್ ಜೈನ್, ಶಂಭುಲಿಂಗ ಹತ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement