ನಾಳೆ ತಪಾಸಣೆ, ಮಾಹಿತಿ ಪ್ರಾತ್ಯಕ್ಷಿಕೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.6
ಆಯುಷ್ ಇಲಾಖೆ, ಶಿರಸಿಯ ನಿಸರ್ಗ ಟ್ರಸ್ಟ್ ಆಶ್ರಯದಲ್ಲಿ ಉಚಿತ ಮಧುಮೇಹ ತಪಾಸಣೆ ಮತ್ತು ಆಯುಷ್ ಚಿಕಿತ್ಸೆಗಳ ಮಾಹಿತಿ ಪ್ರಾತ್ಯಕ್ಷಿಕೆ ಕಾರ್ಯಾಗಾರ ಮಾ. 8ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನಗರದ ಹೊಟೇಲ್ ತಾರಾಪ್ಲಾಜಾದ 2ನೇ ಮಹಡಿಯಲ್ಲಿ ಜರುಗಲಿದೆ.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ಕಾರ್ಯಾಗಾರ ಉದ್ಘಾಟಿಸುವರು. ಮಧುಮೇಹ ಪರಿಣಿತ ಡಾ. ಪ್ರವೀಣ ಜೇಕಲ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಆಯುಷ್ ನೋಡಲ್ ಅಧಿಕಾರಿ ಡಾ. ಮನೋಜಕುಮಾರ ಸವಣೂರು ಹಾಗೂ ಜಿಲ್ಲಾ ಯೋಗ ಸಂಯೋಜಕ ಡಾ. ಜಿ.ಸಿ. ನಿಡಗುಂದಿ ಪಾಲ್ಗೊಳ್ಳುವರು. ಕಾರ್ಯಾಗಾರಕ್ಕಿಂತ ಒಂದು ದಿನ ಮುಂಚಿತವಾಗಿ ಆಸಕ್ತ ಮಧುಮೇಹ ವ್ಯಕ್ತಿಗಳು ತಮ್ಮ ಹೆಸರನ್ನು ದೂರವಾಣಿ-08384-226414, 225414, ಮೊಬೈಲ್- 9242772444, 9243772555, 9243772999, 9243772777 ಇಲ್ಲಿ ನೋಂದಾಯಿಸಬಹುದು.
ಕನಿಷ್ಠ 200 ಪ್ರಥಮ ನೋಂದಾಯಿತ ವ್ಯಕ್ತಿಗಳ ತಪಾಸಣೆ ಮಾಡಲಾಗುವುದು ಹಾಗೂ 40-50 ವರ್ಷದ ಪುರುಷರು ಹಾಗೂ ಮಹಿಳೆಯರು ಹೆಸರು ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ತಿಳಿಸಿದ್ದಾರೆ.