ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾನಕ್ಕೆ ಸಕಲ ಸಿದ್ಧತೆ: ಮಹೇಶಕುಮಾರ

Lingaraj Badiger
Updated On : 7 Mar 2013, 11:27 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ.6
ನಗರಸಭೆಯ 31 ವಾರ್ಡ್‌ಗಳಿಗೆ ಗುರುವಾರ ನಡೆಯಲಿರುವ ಮತದಾನ ಕಾರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಹಸೀಲ್ದಾರ್ ಮಹೇಶಕುಮಾರ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಗರದ ಎಲ್ಲ 31 ವಾರ್ಡುಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ನಿಯೋಜಿಸಿರುವ ಸಿಬ್ಬಂದಿಗೆ ಅಗತ್ಯ ಸಲಕರಣೆಗಳನ್ನು ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರಸಭೆಯ 31 ವಾರ್ಡುಗಳಲ್ಲಿ 72 ಮತಗಟ್ಟೆಗಳನ್ನು ತೆರೆದಿದ್ದು, ಅದರಲ್ಲಿ 10 ಅತಿಸೂಕ್ಷ್ಮ 6 ಸೂಕ್ಷ್ಮ ಹಾಗೂ 56 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಗೆ 1 ಮತಗಟ್ಟೆ ಅಧಿಕಾರ, ಓರ್ವ ಸಹಾಯಕ ಮತಗಟ್ಟೆ ಅಧಿಕಾರಿ, 2 ಸಹಾಯಕ ಸಿಬ್ಬಂದಿ ಸೇರಿ 72 ಮತಗಟ್ಟೆಗಳಿಗೆ 288 ಜನ ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕೆ ಹಾಗೂ ಶಾಂತ, ಸುವ್ಯವಸ್ಥೆಯ ಮತದಾನ ಕಾರ್ಯಕ್ಕಾಗಿ 1 ಡಿವೈಎಸ್ಪಿ, 1 ಸಿಪಿಐ, 6 ಪಿಎಸ್‌ಐ, 7 ಎಎಸ್‌ಐ, 1 ಕೆಎಸ್‌ಆರ್‌ಪಿ, 1 ಡಿಆರ್ ಮತ್ತು 113 ಜನ ಪೊಲೀಸ್ ಪೇದೆ ಸೇರಿದಂತೆ 35 ಹೊಮ್‌ಗಾರ್ಡ್‌ಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ 31 ವಾರ್ಡುಗಳಲ್ಲಿ 32,143 ಪುರುಷ ಹಾಗೂ 30,206 ಮಹಿಳೆಯರು ಸೇರಿ ಒಟ್ಟು 62,349 ಮತದಾರರ ಭಾವಚಿತ್ರವಿರುವ, ಮತದಾರರ ಪಟ್ಟಿಯನ್ನು ಚುನಾವಣಾ ಸಿಬ್ಬಂದಿಗೆ ನೀಡಲಾಗಿದೆ ಎಂದು ತಹಸೀಲ್ದಾರ್ ಮಹೇಶಕುಮಾರ ತಿಳಿಸಿದರು.
ಈ ಸಂದರ್ಭ ನಗರ ಪೊಲೀಸ್ ಠಾಣೆ ಪಿಎಸ್‌ಐ ಎಂ.ಐ. ಗೌಡಪ್ಪಗೌಡ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement