ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಸಿಲಲ್ಲಿ ಸುಸ್ತಾದ ಜನ: ಆಕ್ರೋಶ

Parashurama
Updated On : 8 Mar 2013, 11:16 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 7
ಸುಡುಬಿಸಿಲಲ್ಲಿ ಕಾದು ಸುಸ್ತಾದ ಪಟ್ಟಣದ 15ನೇ ವಾರ್ಡ್ ಮತದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಒಟ್ಟು 745 ಮತದಾರಿರುವ 15ನೇ ವಾರ್ಡ್‌ನ ಮತದಾರರಿಗೆ ಪೂರ್ವ ನಿಗದಿಯಂತೆ ಇಸ್ಲಾಂಪುರದ ಅಂಗನವಾಡಿ ಕಟ್ಟಡದಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಸರತಿಯಲ್ಲಿ ನಿಂತ ಮತದಾರರಿಗೆ ನೆರಳಿನ ವ್ಯವಸ್ಥೆ ಇಲ್ಲದಿರುವುದರಿಂದ ಸುಡುಬಿಸಿಲಿನಲ್ಲಿ ಸುಸ್ತಾದರು. ಮುಂಜಾನೆ 11 ಗಂಟೆ ಸುಮಾರಿಗೆ ಏಕಕಾಲಕ್ಕೆ ನೂರಕ್ಕೂ ಹೆಚ್ಚು ಮತದಾರರು ಮತಗಟ್ಟೆಗೆ ಆಗಮಿಸಿದರು. ಬಹಳ ಹೊತ್ತು ಬಿಸಿಲಿನಲ್ಲಿ ನಿಲ್ಲುವಂತಾಯಿತು. ಹೀಗಾಗಿ ಸಹನೆ ಕಳೆದುಕೊಂಡರು. ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಸಂಕಮ್ಮ ಸಂಕಣ್ಣನವರ, ಚುನಾವಣಾ ಅಯೋಗ ಶಾಲೆ ಕಾಲೇಜುಗಳ ಕಟ್ಟಡಗಳಲ್ಲಿ ಮತಗಟ್ಟೆ ಸ್ಥಾಪಿಸಿರುವುದು ಸ್ವಾಗತಾರ್ಹವಾದರೂ ಮತದಾರರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಅಂಗವಿಲರು, ಅನಾರೋಗ್ಯ ಪೀಡಿತರು, ವಯೋವೃದ್ಧರು ಮತದಾನ ಮಾಡುವುದು ಕಷ್ಟ. ಹೀಗಾಗಿ ಕೆಲವರು ಮತ ಚಲಾವಣೆ ಮಾಡದೆ ಮರಳಿದ್ದಾರೆ. ಕೆಲವು ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕೂಡಲೇ ಚುನಾವಣಾಧಿಕಾರಿ ಮತಗಟ್ಟೆ ಸಂ. 15ರ ಕೇಂದ್ರವನ್ನು ಕೂಲಂಕಷವಾಗಿ ಪರಿಶೀಲಿಸಿ, ಮೂಲಸೌಕರ್ಯ ಇರುವ ಕಟ್ಟಡಕ್ಕೆ ಮತಗಟ್ಟೆ ಕೇಂದ್ರ ಸ್ಥಳಾಂತರಿಸಬೇಕು  ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments