ಹಿರೇಕೆರೂರು ಪ. ಪಂ ಶೇ. 74.41 ಮತದಾನ
ಹಿರೇಕೆರೂರು: ಪಟ್ಟಣ ಪಂಚಾಯಿತಿಗೆ ಗುರುವಾರ ಶಾಂತಿಯುತ ಮತದಾನವಾಗಿದ್ದು, ಶೇ. 74.41ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಹಿರೇಕೆರೂರು ಪಪಂನ 16 ವಾರ್ಡ್ಗಳಿಗೆ ಮತದಾನವಾಗಿದೆ. ಎರಡನೇ ವಾರ್ಡ್ನಲ್ಲಿ ಗರಿಷ್ಠ ಶೇ. 82.14 ಹಾಗೂ 15ನೇ ವಾರ್ಡ್ನಲ್ಲಿ ಅತಿ ಕಡಿಮೆ ಶೇ. 61.55 ಮತದಾನವಾಗಿದೆ. ಎಲ್ಲ 16 ವಾರ್ಡ್ಗಳ ಮತದಾನ ವಿವರ: 1ನೇ ವಾರ್ಡ್ - ಶೇ. 71.06, 2ನೇ ವಾರ್ಡ್ - 82.14, 3ನೇ ವಾರ್ಡ್ -71.69, 4ನೇ ವಾರ್ಡ್ -71.65, 5ನೇ ವಾರ್ಡ್ 79.74, 6ನೇ ವಾರ್ಡ್ -74.38, 7ನೇ ವಾರ್ಡ್ -77.25, 8ನೇ ವಾರ್ಡ್ -79.84, 9ನೇ ವಾರ್ಡ್ -73.80, 10ನೇ ವಾರ್ಡ್ -74.52, 11ನೇ ವಾರ್ಡ್ -65.10, 12ನೇ ವಾರ್ಡ್-77.24, 13ನೇ ವಾರ್ಡ್ -77.79, 14ನೇ ವಾರ್ಡ್ -78.77, 15ನೇ ವಾರ್ಡ್ -61.55 ಹಾಗೂ 16ನೇ ವಾರ್ಡ್ -68.85ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ್ ತುಷಾರ ಹೊಸೂರ ತಿಳಿಸಿದ್ದಾರೆ. ಸಿಪಿಐ ವಿಜಯ ಮುರುಗುಂದಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.