ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಕ್ಷಣ ಸ್ತ್ರೀ-ಪುರುಷರ ಒಗ್ಗೂಡಿಸಿದೆ: ಪ್ರಾಚಾರ್ಯ ಆರ್.ವಿ. ಚನ್ನಕೋಟಿಮಠ

Parashurama
Updated On : 10 Mar 2013, 12:30 pm

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 9
ಪ್ರಕೃತಿ ಸ್ತ್ರೀ-ಪುರುಷರನ್ನು ಬೇರ್ಪಡಿಸಿದೆ. ಆದರೆ, ಶಿಕ್ಷಣ ಅವರನ್ನು ಒಂದುಗೂಡಿಸಿದೆ. ಇಂದಿನ ಸಮಾಜದಲ್ಲಿ ಮಹಿಳೆಯರು ಕೂಡಾ ಪುರುಷರಿಗೆ ಸರಿಸಮಾನರಾಗಿ ಜೀವನ ನಡೆಸುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಪ್ರಾಚಾರ್ಯ ಆರ್.ವಿ. ಚನ್ನಕೋಟಿಮಠ ನುಡಿದರು.
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪಾ ಬಿಇಡಿ ಕಾಲೇಜು ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆ ಬಾಲ್ಯವಿವಾಹ, ಸತಿಸಹಗಮನ ಪದ್ಧತಿಗೆ ಸಿಲುಕಿ ನಲುಗಿದ್ದರೆ, ಪ್ರಸಕ್ತ ಸಮಾಜದಲ್ಲಿ ಲಿಂಗ ತಾರತಮ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಮುಂತಾದ ಶೋಷಣೆಗೆ ಗುರಿಯಾಗುತ್ತಿದ್ದಾಳೆ. ಇಂದಿನ ದಿನಗಳಲ್ಲಿ ಉದ್ಯೋಗಸ್ಥ ಮಹಿಳಾ ಸಮಾಜವೂ ಸೇರಿದಂತೆ ಎಲ್ಲ ಮಹಿಳೆಯರು ಗಂಡುಮಕ್ಕಳಿಗೆ ಹಪಾಹಪಿಸುತ್ತಿರುವುದು ಖೇದಕರ. ಇದರ ಪರಿಣಾಮವಾಗಿ ಲಿಂಗಾನುಪಾತದಲ್ಲಿ ಅಸಮತೋಲನ ಉಂಟಾಗಿದೆ. ಮಹಿಳೆಯರು ತಮ್ಮ ಮನೋಧರ್ಮ ಬದಲಿಸಿಕೊಳ್ಳಬೇಕಿದೆ. ಇದಕ್ಕೆ ತಕ್ಕಂತೆ ಪುರುಷ ಸಮಾಜವೂ ಮಹಿಳೆಯ ಬದುಕುವ ಹಕ್ಕನ್ನು ರಕ್ಷಿಸಲು ಅಗತ್ಯ ಸಹಕಾರ ನೀಡಬೇಕಿದೆ. ಮನೆಯ ತಂದೆ-ತಾಯಿ, ಹಿರಿಯರು ಮಕ್ಕಳಿಗೆ ನೈತಿಕ ಪಾಠ ಹೇಳಿಕೊಡುವ ಮೂಲಕ ಮಹಿಳಾ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯಬಹುದಲ್ಲದೇ ಹೆಣ್ಣು ಭ್ರೂಣದ ಬದುಕುವ ಹಕ್ಕನ್ನು ರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದರು.
ಉಪನ್ಯಾಸಕ ಚಂದ್ರಗೌಡ ರಾಮಲಿಂಗಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದಾಳೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ವಾಕ್ಯಗಳು ಸಮಾಜಕ್ಕೆ ಅವರ ಆಗತ್ಯತೆಯನ್ನು ತೋರ್ಪಡಿಸಿವೆ ಎಂದರು. ಮಹಿಳಾ ದಿನಾಚರಣೆ ಕುರಿತಂತೆ ಗುರುರಾಜ ಬಿದರಿ, ಶರಣಬಸಪ್ಪ ಚಿಕ್ಕೊಣಜಿ, ಉಮಾ ಮಡಿವಾಳರ, ಅನಿತಾ, ಪ್ರಿಯಾಂಕ ಪಾಟೀಲ, ಸಾವಿತ್ರಿ ವಿ.ಬಿ, ಶೀಲಾ, ದ್ರಾಕ್ಷಾಯಣಿ ಪಾಟೀಲ ಅನಿಸಿಕೆಗಳನ್ನು ಹಂಚಿಕೊಂಡರು. ಗಣೇಶ ಜಗದ್, ಮೃಂತ್ಯುಂಜಯ, ವಿನಯಕುಮಾರ ಬಾರಂಗಿ, ರೂಪಾ ಪಸಾರದ, ಶ್ರೀಕಾಂತ ಆರ್.ಜಿ, ಶಂಭುಲಿಂಗ ಅಕ್ಕಿ ಉಪಸ್ಥಿತರಿದ್ದರು. ಆನಂದ ಕೊಂಚಿಗೇರಿ ಸ್ವಾಗತಿಸಿದರು. ಪುನೀತ ಬಾರ್ಕಿ ನಿರ್ವಹಿಸಿದರು. ವೀರೇಶ ಮಡ್ಲೂರ  ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments