ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮಾಜ ತಿದ್ದುವ ಕಾರ್ಯಗಳಾಗಬೇಕು

Parashurama
Updated On : 10 Mar 2013, 12:31 pm

ಹಾನಗಲ್ಲ:  ಹಾನಗಲ್ಲಿನ ವಿವೇಕಾನಂದ ನಗರದ ಅನ್ನಪೂರ್ಣೇಶ್ವರಿ ದೇವಿಯ ನೂತನ ಮಂದಿರ ನಿರ್ಮಾಣಕ್ಕೆ ಮಾಜಿ ಸಚಿವ ಸಿ.ಎಂ. ಉದಾಸಿ ಶಿಲಾನ್ಯಾಸ ನೆರವೇರಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮ-ಸಂಸ್ಕಾರಗಳ ಅಗತ್ಯ ಈಗ ಅತ್ಯಂತ ಅವಶ್ಯವಾಗಿದೆ. ನಾಡು ಸಮೃದ್ಧವಾಗಲು ನ್ಯಾಯ ನೀತಿ ನಿಷ್ಠರತೆಗಳು ಬೇಕು. ಸಮಾಜವನ್ನು ತಿದ್ದುವ ಧರ್ಮ ಕಾರ್ಯಗಳೂ ನಡೆಯಬೇಕು ಎಂದರು.
 ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಧರ್ಮ ರಕ್ಷಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಪಾಲ್ಗೊಳ್ಳಬೇಕಾಗಿದೆ. ಮನುಷ್ಯನಲ್ಲಿನ ಅಂಧಕಾರ ಕಳೆದು ನಿರ್ಮಲ, ಪ್ರಾಮಾಣಿಕ ಸಮಾಜ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಧರ್ಮದ ದಾರಿ ತಪ್ಪಿಸುವ ಕೆಲಸ ನಡೆಯಬಾರದು ಎಂದರು.
  ಧರ್ಮದ ಹೆಸರಿನಲ್ಲಿ ಮೋಸ ವಂಚನೆಗಳಿಗೆ ಅವಕಾಶವೂ ಸಲ್ಲದು. ಭಕ್ತಿಗೆ ಮೌಢ್ಯತೆಯೂ ಬೇಡ. ಶ್ರದ್ಧೆ-ಭಕ್ತಿ ಬೇಕು ಎಂದರು.
 ಜಡೆ ಶಾಂತಲಿಂಗ ಮಹಾಸ್ವಾಮಿಗಳು, ಗೊಗ್ಗೆಹಳ್ಳಿ ಶ್ರೀಗಳು, ಮೂಡಿಮಠದ ಶ್ರೀಗಳು, ನೀಲಮ್ಮ ಉದಾಸಿ, ಶಿವಗಂಗಕ್ಕ ಪಟ್ಟಣದ, ಎಂ.ಎಚ್. ಕಲಾಲ, ರವಿಕಿರಣ ಪಾಟೀಲ, ಎನ್.ಆರ್. ನವಲೆ, ಶ್ಯಾಮ ತಿರುಮಲೆ, ಪರಮೇಶಪ್ಪ ಬಡಿಗೇರ, ಶಂಭಣ್ಣ ಆಲದಕಟ್ಟಿ, ಗುಲಾಮಅಲಿ ಶಾನವರ, ಜಿ.ವಿ. ಕಂಬಾಳಿಮಠ, ಮಧುಮತಿ ಪೂಜಾರ, ಎನ್.ಎಂ. ಪೂಜಾರಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments