ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಚಿವ ಬೊಮ್ಮಾಯಿ ಪ್ರವಾಸ

Lingaraj Badiger
Updated On : 14 Mar 2013, 11:37 am

ಹಾವೇರಿ: ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾ. 14ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, 10.30ಕ್ಕೆ ಶಿಗ್ಗಾಂವಿ ತಾಲೂಕು ಹೊಸಮುತ್ತಳ್ಳಿ ಗ್ರಾಮಕ್ಕೆ ಆಗಮಿಸಿ, ಕಾಂಕ್ರೀಟ್ ರಸ್ತೆ ಕಾಮಗಾರಿ, 11.30ಕ್ಕೆ ಮಡ್ಲಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 12.30ಕ್ಕೆ ದುಂಡಶಿ ತಾಂಡಾದಲ್ಲಿ ಸೇವಾಲಾಲ ನೂತನ ಸಭಾಭವನ ಉದ್ಘಾಟನೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 1ಗಂಟೆಗೆ ದುಂಡಶಿಯಲ್ಲಿ ಕುಡಿಯುವ ನೀರು ಮೇಲ್ಮಟ್ಟ ಜಲಾಗಾರ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 2.30ಕ್ಕೆ ಬಿ.ಬಸಾಪೂರದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಯಳ್ಳಮ್ಮನ ಚೌಕ್ ರಸ್ತೆ ನಿರ್ಮಾಣ ಕಾಮಗಾರಿ, 3.30ಕ್ಕೆ ಅರಟಾಳದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ, 5 ಗಂಟೆಗೆ  ಹೊಸೂರ-ಯತ್ನಳ್ಳಿಯಲ್ಲಿ ಸುವರ್ಣ ಗ್ರಾಮ ಯೋಜನೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಹುಬ್ಬಳ್ಳಿಗೆ ತೆರಳಿ, ರಾತ್ರಿ 8ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ಮಹಿಳೆ ಆತ್ಮಹತ್ಯೆ
ಹಾವೇರಿ: ಅನಗತ್ಯ ವಿಷಯಕ್ಕೆ ಮಹಿಳೆಯೋರ್ವಳು ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ರಾಣಿಬೆನ್ನೂರಿನಲ್ಲಿ ಬುಧವಾರ ಜರುಗಿದೆ. ಮೃತ ಮಹಿಳೆಯನ್ನು ರಂಗನಾಥ ನಗರದ ವೀಣಾ ಉರ್ಫ್ ಆಶಾ ನಾಗರಾಜ ಹೊನ್ನತ್ತಿ (34) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಜಂಬುನಾಥ ತಿರಕಪ್ಪ ನಾಗೇನಹಳ್ಳಿ ರಾಣಿಬೆನ್ನೂರು ಶಹರ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement