ಇಂದು ಪುಟ್ಟರಾಜರ 99ನೇ ವರ್ಧಂತ್ಯುತ್ಸವ
ಹಾನಗಲ್ಲ: ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ, ಪುಟ್ಟರಾಜ ಗವಾಯಿಗಳ 99ನೇ ವರ್ಧಂತಿ ಉತ್ಸವ ಅವರ ಹುಟ್ಟೂರಾದ ಹಾನಗಲ್ಲ ತಾಲೂಕಿನ ದೇವರಹೊಸಪೇಟೆ ಗ್ರಾಮದಲ್ಲಿ ಮಾ. 16ರಂದು ನಡೆಯಲಿದೆ.
ಬೆಳಗ್ಗೆ ಸಿದ್ಧರಾಮೇಶ್ವರರ ಗದ್ದುಗೆ ಹಾಗೂ ರೇಣುಕಾಚಾರ್ಯರ ಮೂರ್ತಿಗೆ ಮಹಾ ರುದ್ರಾಭಿಷೇಕ, ಲಿಂ. ಪುಟ್ಟರಾಜ ಕವಿ, ಗವಾಯಿಗಳ ಪುತ್ಥಳಿಗೆ ಸಹಸ್ರ ಬಿಲ್ವಾರ್ಚನೆ ಹಾಗೂ ಕೂಡಲದ ಗುರುನಂಜೇಶ್ವರ ಶ್ರೀಗಳ ಅಧ್ಯಕ್ಷತೆಯಲ್ಲಿ ಲಿಂಗದೀಕ್ಷೆ, ಅಯ್ಯಾಚಾರ ಜರುಗುವವು. ಮಧ್ಯಾಹ್ನ 12.15ಕ್ಕೆ ಸಾಮೂಹಿಕ ವಿವಾಹ. 3ಕ್ಕೆ ಸಿದ್ಧರಾಮೇಶ್ವರ ಮೂರ್ತಿ ಹಾಗೂ ಪಂ. ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ. ಸಂಜೆ 6ಕ್ಕೆ ಧರ್ಮಸಭೆ. ಗುರುಸಿದ್ಧ ರಾಜಯೋಗೀಂದ್ರ ಶ್ರೀ ಸಾನ್ನಿಧ್ಯ ವಹಿಸುವರು. ಶಿವಯೋಗೀಶ್ವರ ಶ್ರೀಗಳು ಅಧ್ಯಕ್ಷತೆ ವಹಿಸುವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ನೇತೃತ್ವ ವಹಿಸುವರು. ಮಾಜಿ ಸಚಿವ ಸಿ.ಎಂ. ಉದಾಸಿ, ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಮಂಜುನಾಥ ಕುನ್ನೂರ, ಮನೋಹರ ತಹಶೀಲ್ದಾರ್, ಗೀತಾ ಅಂಕಸಖಾನಿ, ಪದ್ಮನಾಭ ಕುಂದಾಪುರ, ಅನಿತಾ ಶಿವೂರ, ರಹಮತಬಿ ಬುಡ್ನಾನವರ, ಶಶಿಕಲಾ ಹುಡೇದ, ಪಾಲ್ಗೊಳ್ಳುವರು.