ಗೌರವ ಡಾಕ್ಟರೇಟ್ ಪ್ರದಾನ
ರಾಣಿಬೆನ್ನೂರು: ಇಲ್ಲಿನ ತರಳಬಾಳು ತಾಂತ್ರಿಕ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಧ ಡಿ. ಬಸವರಾಜಪ್ಪ ಅವರಿಗೆ ಗುಲಬರ್ಗಾ ವಿವಿಯ 31ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಗಿದೆ. ಡಿ. ಬಸವರಾಜಪ್ಪ ಗುಲಬರ್ಗಾ ವಿವಿ ಪ್ರಾಧ್ಯಾಪಕ ಡಾ. ಎಂ.ಎಚ್. ಮುದ್ದೇಬಿಹಾಳರ ಮಾರ್ಗದರ್ಶನದಲ್ಲಿ 'ಸಮ್ ರಿಸೆಂಟ್ ಡಾಮಿನೇಶನ್ ರಿಸಲ್ಟ್ಸ್ ಇನ್ ಗ್ರಾಫ್ ಥಿಯರಿ' ವಿಷಯ ಮೇಲೆ ಸಂಶೋಧನೆ ನಡೆಸಿ ಮಹಾಪ್ರಬಂಧ ಸಲ್ಲಿಸಿದ್ದರು.