ನಾಳೆ ಸ್ನೇಹಾಲಯ ಫೌಂಡೇಶನ್ ಉದ್ಘಾಟನೆ
ರಾಣಿಬೆನ್ನೂರು: ಸ್ನೇಹಾಲಯ ಫೌಂಡೇಶನ್ ಉದ್ಘಾಟನಾ ಸಮಾರಂಭ ಮಾ. 17ರಂದು ಸಂಜೆ 4ಕ್ಕೆ ಎಜ್ಯು ಏಷ್ಯಾ ವರ್ಲ್ಡ್ ಶಾಲಾ ಆವರಣದಲ್ಲಿ ನಡೆಯಲಿದೆ.
ಸಂಸ್ಥೆ ಅಧ್ಯಕ್ಷ ದಿವಾಕರಮೂರ್ತಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಡವರ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಯಂ ಉದ್ಯೋಗ ತರಬೇತಿ ನೀಡುವುದು. ವಿವಿಧ ರೋಗಗಳಿಂದ ನರಳುತ್ತಿರುವ ವ್ಯಕ್ತಿಗಳಿಗೆ ಧನಸಹಾಯ ನೀಡುವುದು ಸಂಸ್ಥೆ ಉದ್ದೇಶವಾಗಿದೆ ಎಂದರು. ಡಾ ಮೋಹನ ಹಂಡೆ ಉದ್ಘಾಟಿಸುವರು. ತಹಸೀಲ್ದಾರ್ ಸತೀಶಕುಮಾರ, ಡಿವೈಎಸ್ಪಿ ಜಯಪ್ರಕಾಶ, ಸಿಪಿಐ ವಿ.ಎಸ್. ಹಾಲಮೂರ್ತಿರಾವ್, ಬಿಇಓ ಕೆ. ಲಕ್ಷ್ಮಣ, ಎಸ್.ಎಸ್. ಚನ್ನವೀರಶೆಟ್ಟಿ, ಅರಣ್ಯಾಧಿಕಾರಿ ಎಂ.ಬಿ. ಅಗಸನಹಳ್ಳಿ, ಮಾಜಿ ಸಚಿವ ಕೆ.ಬಿ. ಕೊಳಿವಾಡ, ಮಾಜಿ ಶಾಸಕ ಜಿ. ಶಿವಣ್ಣ, ರುಕ್ಮಿಣಿ ಸಾಹುಕಾರ, ಆರ್. ಶಂಕರ ಇತರರು ಆಗಮಿಸುವರು. ಉಪನ್ಯಾಸಕಿ ಮಂಗಳಗೌರಿ ಪುಟ್ಟರಾಜ ಗವಾಯಿಗಳವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡುವರು.