ಇಂದು ಸ್ವಾಮೀಜಿ ಭೇಟಿ
ಶಿಗ್ಗಾಂವಿ: ತಾಲೂಕಿನ ಕುನ್ನೂರು ಗ್ರಾಮಕ್ಕೆ ಮಾ. 17ರಂದು ಶಿರಹಟ್ಟಿ ಸಂಸ್ಥಾನ ಮಠದ 13ನೇ ಪಟ್ಟಾಧ್ಯಕ್ಷರಾದ ಜಗದ್ಗುರು ಶ್ರೀ ಫಕೀರಸಿದ್ದರಾಮೇಶ್ವರ ಸ್ವಾಮೀಜಿ ಮನೆ ಮನೆಗಳಿಗೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಾದ ನೀಡುವರು. ಕುನ್ನೂರು ಗ್ರಾಮಕ್ಕೆ ಶಿರಹಟ್ಟಿ ಸಂಸ್ಥಾನ ಮಠದ 12ನೇ ಪೀಠಾಧ್ಯಕ್ಷ ಹಂದ್ರಾಳ ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳು ಆಗಮಿಸಿ, ಮಠದ ಆನೆಗಳನ್ನು, ಒಂಟಿಗಳನ್ನು ಹಾಗೂ ತಮ್ಮ ಮಠದ ದಂಡು ದರ್ಬಾರುಗಳನ್ನು ತಂದು ಸುಮಾರು 8, 9 ದಿನಗಳ ಕಾಲಾವಧಿಯನ್ನು ಎಲ್ಲರ ಮನೆಗಳಿಗೆ ತೆರಳಿ ಭಕ್ತರನ್ನು ಹರಸಿದ್ದರೆನ್ನೆಲಾಗುತ್ತದೆ. ಮಾ. 17ರಂದು ಬೆಳೆಗ್ಗೆ ಶ್ರೀ ಫಕೀರಸಿದ್ದರಾಮೇಶ್ವರ ಸ್ವಾಮೀಜಿಯನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.