ಜಾತಿ-ಭೇದ ಮರೆತು ಬೋಧಿಸಿ: ಶಂಕರಗೌಡ
ರಾಣಿಬೆನ್ನೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಕಾಲೇಜಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಜಾತಿ-ಭೇದ ಮರೆತು ಸಮಾಜದ ಎಲ್ಲಾ ವರ್ಗದ ಜನರ ಸೇವೆ ಮಾಡುವಂತಹ ಉತ್ತಮ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಯುವ ಮುಖಂಡ ಶಂಕರಗೌಡ ಭಂಗಿಗೌಡ್ರ ಹೇಳಿದರು.
ಆರ್ಟಿಇಎಸ್ ಕಾಲೇಜಿನಿಂದ ತಾಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಎನ್ನೆಸ್ಸೆಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟುವಾಗಲೆ ಯಾರೂ ಎಲ್ಲವನ್ನು ಕಲಿತು ಬಂದಿರುವುದಿಲ್ಲ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಓದುವ ಮಕ್ಕಳ ಮನಸ್ಸಿನಲ್ಲಿರುವ ವಿಚಾರಕ್ಕೂ, ಕಾಲೇಜುಗಳಲ್ಲಿ ಓದುವ ಮಕ್ಕಳ ಮನಸ್ಸಿನಲ್ಲಿರುವ ವಿಚಾರಕ್ಕೂ ವ್ಯತ್ಯಾಸವಿರುತ್ತದೆ.
ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುವಂತಾಗಲೆಂಬ ಸದುದ್ದೇಶದಿಂದ ಸೇವಾ ಮನೋಭಾನೆಯ ಗುಣಗಳನ್ನು ಕಲಿಸುವುದಕ್ಕಾಗಿ ಎನ್ನೆಸ್ಸೆಸ್ನ್ನು ಸರ್ಕಾರ ಜಾರಿಗೆ ತಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಯೋಜನೆ ಲಾಭ ಪಡೆಯಬೇಕೆಂದು ಬಂಗಿಗೌಡ್ರ ಹೇಳಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಎಸ್.ಎಚ್. ಮಾಚೇನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಹೂಳೆಆನ್ವೇರಿ ಗ್ರಾಮದ ಮುಖಂಡರಾದ ಚನ್ನಬಸನಗೌಡ ಕೋಟೇಗೌಡ್ರ, ಸೋಮಪ್ಪ ಯಲ್ಲನಾಯ್ಕರ ಪ್ರೊ. ಎಂ.ವಿ. ಹಿತ್ತಲಮನಿ, ಲಿಂಗರಾಜ ಇಟಗಿ, ಡಾ. ಆರ್.ಎನ್. ಕಲ್ಲೊಳ್ಳಿಕರ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.