ಪಾರದರ್ಶಕತೆಯಿಂದ ಸಮಾಜ ಸೇವೆ ಮಾಡಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ. 17
ಜನಪ್ರತಿಯಾದವರು ಚುನಾವಣೆಯಲ್ಲಿ ಗೆಲವು ಸಾಧಿಸಿದಾಗ ಗರ್ವ ಪಡೆದೆ ತಪ್ಪುಗಳನ್ನು ತಿದ್ದಿಕೊಂಡು ಸಮಾಜ ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡಬೇಕು. ಪಟ್ಟಣದ ಅಭಿವೃದ್ಧಿಯನ್ನು ಪಾರದರ್ಶಕವಾಗಿ ಮಾಡಲು ಮುಂದಾಗಬೇಕೆಂದು ಮಾಜಿ ಸಚಿವ ಸಿ.ಎಂ. ಉದಾಸಿ ಪಟ್ಟಣ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.
ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಪಪಂಗೆ ಆಯ್ಕೆಯಾದ ನೂತನ ಸದಸ್ಯರಿಗೆ ಜರುಗಿದ ಸನ್ಮಾನ ಸಮಾರಂಭ ಮತ್ತು ಬರುವ ವಿಧಾನಸಭೆಯ ಗೆಲವು ಸಾಧಿಸಲು ಸಿದ್ಧತೆ ಸಭೆ ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ನ್ನಾಗಿ ಬಳಸಿಕೊಂಡು ನಿರ್ಲಕ್ಷ್ಯ ಮಾಡಿದ ಪರಿಣಾಮ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೂರಾರು ಕೋಟಿ ಅನುದಾನವನ್ನು ಅಲ್ಪಸಂಖ್ಯಾತರಿಗೆ ನೀಡಿದ ಪರಿಣಾಮವಾಗಿ ಎಲ್ಲರೂ ಕೆಜೆಪಿಯತ್ತ ವಾಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ನಂತರ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕೆಜೆಪಿ ಗೆಲವು ಸಾಧಿಸಿದೆ. ಯುಡಿಯೂರಪ್ಪ ಇಲ್ಲದ್ದರಿಂದ ಬಿಜೆಪಿ ನೆಲ ಕಚ್ಚಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಹೆಚ್ಚಿನದಾಗಿ ಶ್ರಮಿಸಬೇಕೆಂದರು.
ಕೆಜೆಪಿ ಮುಖಂಡ, ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿದರು. ವಿಪ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಹಿರೇಕೆರೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕೆಜೆಪಿ ಪಕ್ಷವು 16 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಹೆಮ್ಮೆ ಪಡುಯುವಂತೆ ಮಾಡಿದ್ದಾರೆ.
ಅದರಂತೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಅವರನ್ನು ಬಾರಿ ಅಂತರದಿಂದ ಗೆಲವು ಸಾಧಿಸುವಂತೆ ಯುದ್ಧೋಪಾದಿಯಲ್ಲಿ ಶ್ರಮಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲವು ಸಾಧಿಸಿದ ಮಹೇಂದ್ರ ಬಡಳ್ಳಿ, ರವಿ ಪುಟ್ಟಪ್ಪಗೌಡ್ರ, ಶಿವಕುಮಾರ ತಿಪ್ಪಶೆಟ್ಟಿ, ರಘು ಮಾಳಮ್ಮನವರ, ಗೀತಾ ದಂಡಗಿಹಳ್ಳಿ, ಮಮತಾ ಮಳವಳ್ಳಿ, ರತ್ನವ್ವ ತಿಪ್ಪಣ್ಣನವರ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾಲೂಕು ಕೆಜೆಪಿ ಅಧ್ಯಕ್ಷ ಮಹೇಶ ಗುಬ್ಬಿ, ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ. ಹೊಂಬರಡಿ, ಜಿಪಂ ಸದಸ್ಯರಾದ ಸುಜಾತಾ ಕೊಟಗಿಮನಿ, ಪಾರ್ವತೆಮ್ಮ ಬೋಗಾವಿ, ಶಾಂತವ್ವ ಹಾದಿಮನಿ, ರಾಜೇಂದ್ರ ಹಾವೇರಣ್ಣನವರ ಭಾಗಿಯಾಗಿದ್ದರು.
ತಾಪಂ ಸದಸ್ಯರಾದ ಶಿವಣ್ಣ ಗಡಿಯಣ್ಣನವರು, ಚಂದ್ರು ಅಣ್ಪನ್ನವರ, ಕಾರ್ಯಕರ್ತರಾದ ಶಿದ್ದು ನರೇಗೌಡ್ರ, ದತ್ತಾತ್ರೇಯ ರಾಯ್ಕರ, ಕೊಟ್ರೇಶ ಕಾಟೇನಹಳ್ಳಿ, ವಿ.ಎಸ್. ಪುರದ, ಕಾರ್ಯಕರ್ತರು ಇದ್ದರು.