ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಫಾಸ್ಟ್‌ಫುಡ್‌ನಿಂದ ಮಕ್ಕಳಿಗೆ ಕಾಯಿಲೆ

Mainashree
Updated On : 18 Mar 2013, 10:56 am

ಬ್ಯಾಡಗಿ: ಫಾಸ್ಟ್‌ಫುಡ್ ಯುಗಕ್ಕೆ ಹೊಂದಿಕೊಂಡಿರುವ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮುಧುಮೇಹ, ಹೃದ್ರೋಗ, ಇನ್ನಿತರ ದೀರ್ಘ ಕಾಲದ ರೋಗಗಳಿಂದ ಬಳಲುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ ವಿಷಾದಿಸಿದರು.
ಮಂಗಳವಾರ ಪಟ್ಟಣದ ಸಿದ್ದೇಶ್ವರ ಸಭಾಭವನದಲ್ಲಿ ಏರ್ಪಡಿಸಿದ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಸಿದ್ದೇಶ್ವರ ವರ್ತಕರ ಸಂಘ, ಎಪಿಎಂಸಿ ಯಾರ್ಡ್ ಮತ್ತು ನಿಸರ್ಗ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ಆಯುಷ್ ಆರೋಗ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರಸಗೊಬ್ಬರ ಬಳಕೆಯಿಂದಾಗಿ ನಮಗರಿವಿಲ್ಲದಂತೆ ಆಹಾರ ವಿಷ ಮಿಶ್ರಿತವಾಗುತ್ತಿದೆ. ಜನರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗಿದೆ. ಪ್ರಕೃತಿ ಹಾಗೂ ಯೋಗಚಿಕಿತ್ಸೆ ಮೂಲಕ ಬೃಹತ್ ರೋಗಗಳ ಪರಿಹಾರ ಸಾಧ್ಯವಿದೆ ಎಂದರು.
ದೇಶೀಯ ಆಹಾರ ಪದ್ಧತಿಗೆ ತಿಲಾಂಜಲಿ ಹೇಳುತ್ತಿರುವ ಜನರು ರೆಡಿಮೇಡ್ ಹಾಗೂ ಫಾಸ್ಟ್‌ಪುಡ್ ಪಾರ್ಲರ್‌ಗಳಿಗೆ ಮುಗಿಬೀಳುತ್ತಿರುವುದು ದುರಂತ ಎಂದರು.
ಡಾ೤ ಗುರುರಾಜ ನಿಡಗುಂದಿ ಮಾತನಾಡಿ, ಪ್ರಕೃತಿದತ್ತವಾದ ಚಿಕಿತ್ಸೆಗಳ ಮೂಲಕ ಬಹುತೇಕ ಕಾಯಿಲೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ಯೋಗಾಭ್ಯಾಸ, ವ್ಯಾಯಾಮಗಳನ್ನು ನಿತ್ಯರೂಢಿ ಮಾಡಿಕೊಂಡು ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ ವಹಿಸಿದ್ದರು, ಯುವ ವಿಜ್ಞಾನಿ ಡಾ೤ ಪ್ರವೀಣ ಜೇಕಬ್, ಸವಣೂರು ನೋಡಲ್ ಅಧಿಕಾರಿ ಡಾ೤ ಮನೋಜ್‌ಕುಮಾರ ಸವಣೂರು, ನಿಸರ್ಗ ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಹೆಗಡೆ, ಯೋಗ ಗುರು ಮಂಜುನಾಥ ಹೆಗಡೆ, ಕೇರಳದ ಆಯುಷ್ ತಜ್ಞವೈದ್ಯೆ ಅಖಿಲಾ ಜೋಲಿ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿದರು. ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ಪಾರಂಪರಿಕ ವೈದ್ಯರ ಜಿಲ್ಲಾಧ್ಯಕ್ಷ ವಿಷ್ಣು ಕೋಟಿಹಾಳ, ವೈದ್ಯರಾದ ಭರಮಪ್ಪ ಹುಲಗಣ್ಣನವರ, ಎಂ.ಆರ್. ಹಿರೇಮಠ, ಶಿವನಗೌಡ ಪಾಟೀಲ, ಚಂದ್ರಶೇಖರ ವರ್ದಿ, ಬಾಲರಾಜ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement