ಸುದ್ದಿ ಸಂಕ್ಷೇಪ
ಸಮಸ್ಯೆಯೇ? ಫೋನ್ ಮಾಡಿ!
ಹಾನಗಲ್ಲ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ದೂರವಾಣಿ ಸಂವಾದವನ್ನು ಮಾ. 18 ಹಾಗೂ 19ರಂದು ಆಯೋಜಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆಯಲಿರುವ ಈ ದೂರವಾಣಿ ಸಂವಾದ (ಫೋನ್-ಇನ್) ಕಾರ್ಯಕ್ರಮದಲ್ಲಿ ಸೋಮವಾರ ಗಣಿತ, ಮಂಗಳವಾರ ವಿಜ್ಞಾನ ವಿಷಯದ ಕುರಿತು ಸಂಜೆ 6ರಿಂದ 8 ಗಂಟೆ ವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸಂವಾದ ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕರಾದ ಟಿ.ಆರ್. ವೇದಂಭಟ್ಟನವರ (9742763263), ಮಹೇಶ ನಾಯಕ (9986270077), ಎಂ.ಸಿ. ಚಿಕ್ಕಮಠ (9448080484), ಶಿವಕುಮಾರ (9902662811), ಚಂದ್ರಶೇಖರ (9901910128), ನಿರ್ಮಲಾ ಮುದಿಗೌಡ್ರ (9480370765), ರವಿ ಕಠಾಣಿ (7829716399), ವಿಜ್ಞಾನ ಶಿಕ್ಷಕರಾದ ವೀರಭದ್ರಪ್ಪ (9481494886), ಸಿ.ಎಸ್. ವಸ್ತ್ರದ (9448839057), ದಿವಾಕರ (9742793917), ತಳವಾರ (9482128215), ನಾಗರಾಜ (9845283227), ಪ್ರಭಾಕರ (9481909747), ಚಾಮರಾಜ (8970827094), ದಾಸರ (9945718536) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕಾವ್ಯಶ್ರೀ ಪ್ರಶಸ್ತಿಗೆ ಭ್ರಷ್ಟಾಚಾರ ಕವಿತೆ ಆಯ್ಕೆ
ರಾಣಿಬೆನ್ನೂರು: ಮಂಡ್ಯ ಜಿಲ್ಲೆಯ ಡಾ. ಜೀ.ಶಂ.ಪ ಸಾಹಿತ್ಯ ವೇದಿಕೆಯಿಂದ ನೀಡುವ ಕಾವ್ಯಶ್ರೀ ಪ್ರಶಸ್ತಿಗೆ ಬಿಎಜೆಎಸ್‌ಎಸ್ ಕಾಲೇಜಿನ ಪ್ರೊ. ಬಿ.ವಿ. ಕೋರಧಾನ್ಯಮಠ ಅವರ ಭ್ರಷ್ಟಾಚಾರ ಕವಿತೆ ಆಯ್ಕೆಯಾಗಿದೆ. ಏ. 20ರಂದು ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿರುವ ರಾಜ್ಯಮಟ್ಟದ 15ನೇ ಕವಿಕಾವ್ಯ ಮೇಳದಲ್ಲಿ ಕೋರಧಾನ್ಯಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶಿವಮೂರ್ತೆಪ್ಪ ನಿಧನ
ಬ್ಯಾಡಗಿ: ತಾಲೂಕಿನ ಬಿಸಲಹಳ್ಳಿ ಗ್ರಾಮದ ಪ್ರಗತಿಪರ ರೈತ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಶಿವಮೂರ್ತೆಪ್ಪ ದೊಡ್ಡಲಿಂಗಪ್ಪ ಯಲಿಗಾರ(70) ಭಾನುವಾರ ನಿಧನ ಹೊಂದಿದರು. ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಬಿಸಲಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 11ಕ್ಕೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗುರುಪಾದಪ್ಪ ಬಣಕಾರ ನಿಧನ
ಹಾವೇರಿ: ತಾಲೂಕಿನ ಭೂ ಕೋಡಿಹಳ್ಳಿ ಗ್ರಾಮದ ಹಿರಿಯರು, ಮಂಡಳ ಪಂಚಾಯತಿ ಮಾಜಿ ಅಧ್ಯಕ್ಷ ಗುರುಪಾದಪ್ಪ ಬಣಕಾರ (91) ನಿಧನರಾಗಿದ್ದಾರೆ. ಅವರಿಗೆ 7 ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಅವರ ಸ್ವಗ್ರಾಮ ಭೂ ಕೋಡಿಹಳ್ಳಿಯಲ್ಲಿ ಮಾ. 18ರಂದು ಮಧ್ಯಾಹ್ನ 2ಕ್ಕೆ ಜರುಗಲಿದೆ. ಬಣಕಾರ ಅವರ ನಿಧನಕ್ಕೆ ಹಾವೇರಿ ವ್ಯಾಪಾರಸ್ಥರು ಹಾಗೂ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.