ಬ್ಯಾಡಗಿ: 50,959 ಚೀಲ ಮೆಣಸಿನಕಾಯಿ ಆವಕ
ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 50,959 ಚೀಲ ಒಣಮೆಣಸಿನಕಾಯಿ ಆವಕವಾಗಿದೆ. ಕಳೆದ ಗುರುವಾರದ ಮೆಣಸಿನಕಾಯಿ ಆವಕಕ್ಕೆ ಹೋಲಿಕೆ ಮಾಡಿದಲ್ಲಿ ಮಾ. 18ರಂದು 9048 ಚೀಲ ಕಡಿಮೆಯಾಗಿದೆ. ಬ್ಯಾಡಗಿ ಕಡ್ಡಿ ಕನಿಷ್ಠ ರು. 1,899ರಿಂದ ರು. 12,899, ಬ್ಯಾಡಗಿ ಡಬ್ಬಿ ಕನಿಷ್ಠ ರು. 2,099ರಿಂದ ಗರಿಷ್ಠ ರು. 14,786, ಗುಂಟೂರ ಕನಿಷ್ಠ ರು. 1,509ರಿಂದ ಗರಿಷ್ಠ ರು. 10,999ರಂತೆ ಮಾರಾಟವಾಗಿವೆ. ಬ್ಯಾಡಗಿ ಕಡ್ಡಿ ಹಾಗೂ ಡಬ್ಬಿ ಮೆಣಸಿಕಾಯಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಗುಂಟೂರ ಮೆಣಸಿನಕಾಯಿ ಕನಿಷ್ಠ ಬೆಲೆಯಲ್ಲಿ ರು. 800 ಹಾಗೂ ಗರಿಷ್ಠ ಬೆಲೆಯಲ್ಲಿ ರು. 900 ಚೇತರಿಕೆ ಕಂಡು ಬಂದಿದೆ.
ಅತಿ ಹೆಚ್ಚು ಮೆಣಸಿನಕಾಯಿ ಮಾದರಿ ಧಾರಣೆಯಲ್ಲಿ ಬ್ಯಾಡಗಿ ಕಡ್ಡಿ ರು. 6589, ಬ್ಯಾಡಗಿ ಡಬ್ಬಿ ರು. 7009 ಹಾಗೂ ಗುಂಟೂರ ಮೆಣಸಿನಕಾಯಿ ರು. 5099ರಂತೆ ಮಾರಾಟವಾಗಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.