ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 19 Mar 2013, 11:06 am

ನಾಳೆ ಪ್ರಗತಿ ಪರಿಶೀಲನೆ ಸಭೆ
ಹಾನಗಲ್ಲ:
ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ಮಾ. 20ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆಯಲಿದೆ. ತಾಪಂ ಅಧ್ಯಕ್ಷ ಮಲ್ಲನಗೌಡಛ ವೀರನಗೌಡ್ರ ಅಧ್ಯಕ್ಷತೆ ವಹಿಸುವರು. ತಾಲೂಕಿನ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳುವರು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಎಚ್‌ಐವಿ ಸೋಂಕಿತ ವಧು-ವರರ ಸಮಾವೇಶ
ಹಾವೇರಿ:
ರಕ್ಷಿತ್ ನೆಟ್‌ವರ್ಕ್ ಆಫ್ ಪಾಜಿಟಿವ್ ಪೀಪಲ್ ಸಂಸ್ಥೆಯಿಂದ ಹಾವೇರಿ ನಗರದಲ್ಲಿ ಪ್ರಥಮ ಬಾರಿಗೆ ಎಚ್‌ಐವಿ ಸೋಂಕಿತ ವಧು-ವರರ ಸಮಾವೇಶವನ್ನು ಇಲ್ಲಿನ ತಾಲೂಕು ಆರೋಗ್ಯ ಭವನದಲ್ಲಿ ಮಾ. 20ರಂದು ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಭಾಗವಹಿಸುವವರು ಮಾ. 19ರ ಸಂಜೆಯೊಳಗಾಗಿ  9535758850, 7760150367, 9008609947, 9449188180 ಈ ದೂರವಾಣಿಗಳಿಗೆ ಸಂಪರ್ಕಿಸಬೇಕು. ಹೊರ ಜಿಲ್ಲೆಗಳಿಂದ ಬರುವಂತಹ ವಧು-ವರರಿಗೆ ಮಾತ್ರ ಸಂಸ್ಥೆಯಿಂದ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು.
ದಾಳಿ: ಕಳ್ಳಭಟ್ಟಿ ವಶ
ಹಾವೇರಿ:
ಸೈಕಲ್ ಮೇಲೆ ಕಳ್ಳಬಟ್ಟಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನಿಂದ 10 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಹುಲಗಿನಕೊಪ್ಪ ಗ್ರಾಮದ ಈರಪ್ಪ ರಾಮಪ್ಪ ವಡ್ಡರ ಎಂದು ಗುರುತಿಸಲಾಗಿದೆ. ದಾಳಿಯನ್ನು ಜಿಲ್ಲಾ ಅಬಕಾರಿ ಉಪ ಆಯುಕ್ತ ಟಿ.ವಿ. ನಾಗರಾಜಪ್ಪ, ಹೊನ್ನಪ್ಪ ಓಲೇಕಾರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಅಬಕಾರಿ ಉಪನೀರಿಕ್ಷಕ ಐ.ಆರ್. ಅಗಸಿಬಾಗಿಲ ಪ್ರಕರಣ ದಾಲಿಸಿದ್ದು, ತನಿಖೆ ನಡೆದಿದೆ.
ಯುವತಿ ಆತ್ಮಹತ್ಯೆ
ಹಾವೇರಿ:
ಅಜ್ಜಿ ಹೇಳಿದ ಬುದ್ಧಿಮಾತನ್ನೇ ತಪ್ಪಾಗಿ ಅರ್ಥೈಸಿಕೊಂಡ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜರುಗಿದೆ. ಮೃತ ಯುವತಿಯನ್ನು ಲಕ್ಷ್ಮೀ ಕಲ್ಲಪ್ಪ ಬಾಗಿಲಮನಿ (17) ಎಂದು ಗುರುತಿಸಲಾಗಿದೆ. ಇವಳ ತಂದೆ-ತಾಯಿಗಳು ಕಲಘಟಗಿ ತಾಲೂಕಿನ ಗಂಜಿಗಟ್ಟಿಯಲ್ಲಿ ವಾಸವಾಗಿದ್ದು, ಈಕೆ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ತನ್ನ ಅಜ್ಜಿಮನೆಯಲ್ಲಿ ವಾಸವಾಗಿದ್ದಳು. ಕಳೆದೆರಡು ದಿನಗಳ ಹಿಂದೆ ಅವಳ ಅಜ್ಜಿ ಪ್ರಸಕ್ತ ದಿನಗಳು ಸೂಕ್ಷ್ಮವಾಗಿವೆ. ಸಂಜೆ ನಂತರ ಮನೆಯ ಹೊರಗೆ ಹೋಗಬೇಡ ಎಂಬ ಬುದ್ಧಿ ಮಾತಿಗೆ ಬೇಸರಿಸಿಕೊಂಡ ಲಕ್ಷ್ಮೀ ವಿಷ ಸೇವಿಸಿದ್ದು, ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳೆಂದು ಅವಳ ತಂದೆ ಕಲ್ಲಪ್ಪ ಚಿನ್ನಪ್ಪ ಬಾಗಿಲಮನಿ ಹಾನಗಲ್ಲ ಪೊಲೀಸ್ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement