ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

22ರಂದು ಗ್ರಾಮೀಣ ನಾಟಕೋತ್ಸವ

Mainashree
Updated On : 20 Mar 2013, 10:38 am

ಹಾವೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಶುವಿನಹಾಳ ಶರೀಫ್ ಶಿವಯೋಗಿ ಮತ್ತು ಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಗ್ರಾಮೀಣ ನಾಟಕೋತ್ಸ-2013 ಕಾರ್ಯಕ್ರಮ ಮಾ. 22ರಂದು ಸಂಜೆ 5ಕ್ಕೆ ಶಿಶುವಿನಹಾಳ ಗ್ರಾಮದಲ್ಲಿ ಜರುಗಲಿದೆ.
ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಿಶುವಿನಹಾಳ ಗ್ರಾಪಂ ಅಧ್ಯಕ್ಷೆ ಮಹಾದೇವಿ ವಾಲ್ಮೀಕಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದರಾದ ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ, ಶಾಸಕ ಬಿ.ಸಿ. ಪಾಟೀಲ, ವಿಪ ಸದಸ್ಯರಾದ ಬಸವರಾಜ ಹೊರಟ್ಟಿ, ಶಿವರಾಜ ಸಜ್ಜನರ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿಪಂ ಉಪಾಧ್ಯಕ್ಷೆ ಗೀತಾ ಸಂಕಸಖಾನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜವ್ವ ಆಡಿನ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಶಿಗ್ಗಾಂವಿ ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ, ಉಪಾಧ್ಯಕ್ಷೆ ಸುಗಂದಾಬಾಯಿ ಘೋಡಕೆ, ತಾಪಂ ಸದಸ್ಯ ನಿಂಗಣ್ಣ ಜವಳಿ, ಶಿಶುವಿನಹಾಳ ಗ್ರಾಪಂ ಉಪಾಧ್ಯಕ್ಷ ಮಹಾದೇವಪ್ಪ ರಟಗೇರಿ ಹಾಗೂ ಶಿಶುವಿನಹಾಳ ಶರೀಫ ಶಿವಯೋಗಿ ಮತ್ತು ಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಸ್.ಜಿ. ದೇಶಪಾಂಡೆ ಪಾಲ್ಗೊಳ್ಳುವರು.
ಸಂಜೆ 7ಕ್ಕೆ ಶಿಗ್ಗಾಂವಿ ತಾಲೂಕು ಅತ್ತಿಗೇರಿ ಗ್ರಾಮದ ಕಲ್ಮೇಶ್ವರ ದೊಡ್ಡಾಟ ಮಂಡಳಿ ಕಲಾವಿದರಿಂದ ಸೈಂಧವನ ಕಥೆ ಅರ್ಥಾತ್ ಕಿರಾತಾರ್ಜುನರ ಕಾಳಗ ದೊಡ್ಡಾಟ ನಡೆಯುವುದು. 23ರಂದು ಸಂಜೆ 7 ಗಂಟೆಗೆ ಧಾರವಾಡ ಜಿಲ್ಲೆ ನವಲಗುಂದದ ಪಂಚಲಿಂಗೇಶ್ವರ ನಾಟಕ ಸಂಘದ ಕಲಾವಿದರಿಂದ ನವಲಗುಂದ ಅಜಾತ ನಾಗಲಿಂಗ ಮಹಾತ್ಮೆ ಹಾಗೂ ರಾತ್ರಿ 9ಕ್ಕೆ ದಾವಣಗೆರೆ ಸ್ಫೂರ್ತಿ ಸೇವಾ ಸಂಘದವರಿಂದ ಚನ್ನಪ್ಪ ಚನ್ನಗೌಡ ನಾಟಕಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement