ಅತ್ತಿಗೇರಿ ಗ್ರಾಮದಲ್ಲಿ ಜಲಾನಯನ ನಿರ್ವಹಣೆ ಜಾಥಾ
ಶಿಗ್ಗಾಂವಿ: ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಡಿ ಹುಲಗೂರ ಉಪ ಜಲಾನಯನ ಅತ್ತಿಗೇರಿಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಶ್ರೀ ಶಕ್ತಿ ಅಸೋಸಿಯೇಷನ್ ಆಶ್ರಯದಲ್ಲಿ ಜಾಥಾ ನಡೆಯಿತು.
ತಾಪಂ ಮಾಜಿ ಅಧ್ಯಕ್ಷ ವೀರನಗೌಡ್ರ ಪಾಟೀಲ, ನಿಂಗಣ್ಣ ಜವಳಿ, ಗ್ರಾಪಂ ಅಧ್ಯಕ್ಷೆ ರತ್ನವ್ವ ಡವಲಿ ಉದ್ಘಾಟಿಸಿದರು.
ವೀರನಗೌಡ್ರ ಪಾಟೀಲ ಮಾತನಾಡಿ, ಸರ್ಕಾರ ಸಮಗ್ರ ಜಲಾನಯನ ಯೋಜನೆಯಲ್ಲಿ ಒಡ್ಡು-ಬದು ನಿರ್ಮಾಣ, ಅರಣ್ಯೀಕರಣ, ತೋಟಗಾರಿಕೆ ಮುಂತಾದವುಗಳ ಪ್ರಯೋಜನವನ್ನು ರೈತರು ಪಡೆಯಬೇಕು ಎಂದರು.
ಜಲಾನಯನ ಅಧಿಕಾರಿ ನಾಗನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪಿಡಿಓ ಜಿ.ಎಂ. ಕುಬಸದ, ಕಾರ್ಯದರ್ಶಿ ಕೆ. ದ್ರಾಕ್ಷಾಯಣಿ, ಗ್ರಾಪಂ ಸದಸ್ಯ ನಾಗನಗೌಡ್ರ ಪಾಟೀಲ, ಹಾವೇರಿ ಶ್ರೀ ಶಕ್ತಿ ಅಸೋಸಿಯೇಷನ್ ಸಂಯೋಜಕ ಎಂ.ಎಸ್. ಸಂಗಣ್ಣವರ, ಮುಖ್ಯಸ್ಥ ಎಸ್.ಎಸ್. ಸಕ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಾಥಾ ಮೂಲಕ ಶಾಲಾ ಮಕ್ಕಳು ಮಣ್ಣು, ನೀರು ಸಂರಕ್ಷಣೆ ಕುರಿತು ಘೋಷಣೆ ಕೂಗಿ ಅರಿವು ಮೂಡಿಸಿದರು.