ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಾಲಕಿ ಮೇಲೆ ಅತ್ಯಾಚಾರ

Mainashree
Updated On : 21 Mar 2013, 11:59 am

ಬ್ಯಾಡಗಿ: ಬಾಲಕಿಯೊಬ್ಬಳ ಮೇಲೆ ಯುವಕ ಅತ್ಯಾಚಾರ ನಡೆಸಿದ ಪ್ರಕರಣ ಕಳೆದ ಭಾನುವಾರ (ಮಾ.17) ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ ಬಸಪ್ಪ ಸುಣಗಾರ (ಕರಿನೆಲ್ಲಿ) ಎಂಬಾತ ಎದುರಿನ ಮನೆಯಲ್ಲಿ ಒಬ್ಬಳೇ ಕುಳಿತು ಓದುತ್ತಿದ್ದ 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಧಾವಿಸಿ ಬಂದ ಈಕೆಯ ಸಹೋದರ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆರೋಪಿ ಮಂಜುನಾಥನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಡಿವೈಎಸ್‌ಪಿ ಪೂಜಾರ, ಸಿಪಿಐ ಚಿಕ್ಕರೆಡ್ಡಿ, ಪಿಎಸ್‌ಐ ಬಸವರಾಜ ಕಲ್ಲಮ್ಮನವರ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
2ನೇ ಬಾರಿ: ಆರೋಪಿ ಮಂಜುನಾಥ 2ನೇ ಬಾರಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ತಿಳಿದು ಬಂದಿದೆ. 2011ರ ಏ. 15ರಂದು ಬುಡಪನಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ ಬ್ಯಾಡಗಿ ಠಾಣೆಯಲ್ಲಿ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ, ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಮಂಜುನಾಥ ಮತ್ತೊಮ್ಮೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದಾನೆ.

ಬೆಂಕಿ: 4 ಜಾನುವಾರು ಸಾವು
ರಾಣಿಬೆನ್ನೂರು:
ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆಯಲ್ಲಿದ್ದ 4 ಎಮ್ಮೆಗಳು ಸುಟ್ಟು ಕರಕಲಾದ ಘಟನೆ ಮುಷ್ಟೂರು ಗ್ರಾಮದಲ್ಲಿ ಸಂಭವಿಸಿದೆ. ಎಮ್ಮೆ, ದನದ ಕೊಟ್ಟಿಗೆ ಗ್ರಾಮದ ಸನಾವುಲ್ಲಾಸಾಬ್ ಶೇತಸನದಿ ಎಂಬುವರಿಗೆ ಸೇರಿತ್ತೆನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement