ಜಾಗತೀಕರಣ ಭರಾಟೆಯಿಂದ ಭಾಷೆಗೆ ಧಕ್ಕೆ: ಪ್ರೊ. ಗೌಡರ
ಶಿಗ್ಗಾಂವಿ: ಭಾಷೆ ಯಾವುದಾದರೂ ಸರಿ ಅದು ಒಂದು ಸಾಧನವೇ ಹೊರತು ಮಾನದಂಡವಲ್ಲ. ಪ್ರಸ್ತುತ ದಿನಗಳಲ್ಲಿ ಕನ್ನಡ ಕನ್ನಡಿಗರಿಂದ ಕರ್ನಾಟಕದಿಂದ ದೂರಾಗುತ್ತಿದೆ. ಇದಕ್ಕೆ ಜಾಗತೀಕರಣ, ಸ್ಪರ್ಧಾತ್ಮಕತೆ, ವ್ಯಾವಹಾರಿಕ ತಂತ್ರಜ್ಞಾನದ ಸ್ಥಿತಿ ಕಾರಣವಾಗಿದೆ ಎಂದು ಪ್ರೊ. ಎಸ್.ಪಿ. ಗೌಡರ ವಿಷಾದಿಸಿದರು.
ಇಲ್ಲಿನ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹಚ್ಚೇವು ಕನ್ನಡದ ದೀಪ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಾಚಾರ್ಯ ಬಿ.ಟಿ. ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸತೀಶ ಕುಲಕರ್ಣಿ, ಭೂದಾನಿ ಮುರಿಗೆಪ್ಪ ಅಂಕಲಕೋಟಿ ಇದ್ದರು. ಅರುಣ ಭದ್ರಶೆಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಜಯದೇವ ಸೀರಳ್ಳಿ ಸ್ವಾಗತಿಸಿದರು. ಪ್ರೊ. ಸಿ.ಎಸ್. ಕುಮ್ಮೂರ ವಂದಿಸಿದರು. ಪ್ರೊ. ಸುಜಾತಾ ದೇವರಮನಿ ನಿರ್ವಹಿಸಿದರು.