ಪರೀಕ್ಷೆ: 262 ವಿದ್ಯಾರ್ಥಿಗಳು ಗೈರು
ಹಾವೇರಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಗುರುವಾರ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ನಡೆದಿದ್ದು, ರಾಜ್ಯಶಾಸ್ತ್ರ ವಿಷಯದ 5,729 ವಿದ್ಯಾರ್ಥಿಗಳ ಪೈಕಿ 5,471 ವಿದ್ಯಾರ್ಥಿಗಳು ಹಾಗೂ ಸಂಖ್ಯಾಶಾಸ್ತ್ರದ 220 ವಿದ್ಯಾರ್ಥಿಗಳ ಪೈಕಿ 216 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ರಾಜ್ಯಶಾಸ್ತ್ರ ವಿಷಯದ 258 ಹಾಗೂ ಸಂಖ್ಯಾಶಾಸ್ತ್ರದ 4 ವಿದ್ಯಾರ್ಥಿಗಳು ಸೇರಿದಂತೆ 262 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮ ಹಾಗೂ ಡಿಬಾರ್ ಆಗಿಲ್ಲ ಎಂದು ಡಿಡಿಪಿಯು ಆರ್.ಆರ್. ಕೊಣ್ಣೂರ ತಿಳಿಸಿದ್ದಾರೆ.