24ರಂದು ಮೊರಾರ್ಜಿ, ಚನ್ನಮ್ಮ ಶಾಲೆ ಪರೀಕ್ಷೆ ಆರಂಭ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 22
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಮಾದರಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಮಾ. 24ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ಆಯಾ ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ.
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಇರುವ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗಲು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಸಹಾಯಕ ಪ್ರವೇಶ ಪರೀಕ್ಷಾ ಅಧಿಕಾರಿಯೂ ಆಗಿರುವ ಎಸ್.ಸಿ. ತಿರ್ಲಾಪುರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳು
ಬ್ಯಾಡಗಿ ತಾಲೂಕು- ಎಸ್‌ಜೆಜೆಎಂ ಪದವಿಪೂರ್ವ ಕಾಲೇಜು ಹಾಗೂ ಎಸ್‌ಎಸ್‌ಪಿಎನ್ ಬಾಲಕಿಯರ ಪ್ರೌಢಶಾಲೆ, ಹಾನಗಲ್ಲ, ಸರ್ಕಾರಿ ಕಾಲೇಜು-ಮಲ್ಲಿಗಾರ, ರೋಶನಿ ಪ್ರೌಢಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಹತ್ತಿರ, ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯ, ಸರ್ಕಾರಿ ನ್ಯೂ ಪದವಿಪೂರ್ವ ಕಾಲೇಜ್ ಹಾಗೂ ಜನತಾ ಡಿಎಸ್ ಕಾಲೇಜು. ಶಿಗ್ಗಾಂವಿ- ಎಸ್‌ಬಿ ಮಾಮಲೆ ದೇಸಾಯಿ ಪದವಿಪೂರ್ವ ಕಾಲೇಜು ಹಾಗೂ ಜೆಎಂ ಜೆ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ.
ರಾಣಿಬೆನ್ನೂರು- ರೋಟರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿಎಜೆಎಸ್‌ಎಸ್ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯ. ಸವಣೂರು- ಮೊರಾರ್ಜಿ ದೇಸಾಯಿ ವಸತಿ ಹಾಗೂ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ. ಹಿರೇಕೆರೂರು- ಡಿಆರ್‌ಟಿ ಪ್ರೌಢಶಾಲೆ, ಕೆ.ಎಚ್. ಪಾಟೀಲ ಪದವಿಪೂರ್ವ ಕಾಲೇಜು ಹಾಗೂ ಬಿ.ಆರ್. ತಂಬಾಕದ ಪದವಿ ಕಾಲೇಜು. ಹಾವೇರಿ- ಮುನ್ಸಿಪಲ್ ಹೈಸ್ಕೂಲ್, ಶಿವಲಿಂಗೇಶ್ವರ ಡಿಇಡಿ ಕಾಲೇಜು ಹಾಗೂ ಬಸವೇಶ್ವರ ಬಿಇಡಿ ಕಾಲೇಜು.