30ರಂದು ಬಸವೇಶ್ವರ ರಥೋತ್ಸವ
ಶಿಗ್ಗಾಂವಿ: ತಾಲೂಕಿನ ಸದಾಶಿವಪೇಟೆ ಗ್ರಾಮದಲ್ಲಿ ಮಾ. 30ರಂದು ಶರಣ ಬಸವೇಶ್ವರ 33ನೇ ವರ್ಷದ ಪುರಾಣ ಪ್ರವಚನ, ಸಾಮೂಹಿಕ ವಿವಾಹ ಮತ್ತು ರಥೋತ್ಸವ ಜರುಗಲಿವೆ. ಮಾ. 30ರಂದು ಬೆಳಗ್ಗೆ 9 ಗಂಟೆಗೆ ಶರಣ ಬಸವೇಶ್ವರರ ಮಠದಿಂದ ಶರಣ ಬಸವೇಶ್ವರ ಭಾವಚಿತ್ರ ಮೆರವಣಿಗೆ ಆರಂಭವಾಗಿ ಸದಾಶಿವಪೇಟೆ, ನಾರಾಯಣಪುರ ಹಾಗೂ ಮುನವಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸುವುದು. ಮಾ. 31ರಂದು ಬೆಳಗ್ಗೆ 10 ಗಂಟೆಗೆ ಪುರಾಣ ಮಂಗಲ. ಬಳಿಕ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ. ಸಂಜೆ 4 ಗಂಟೆಗೆ ಶರಣ ಬಸವೇಶ್ವರರ ರಥೋತ್ಸವ, ರಾತ್ರಿ 8 ಗಂಟೆಗೆ ಶಿವಕಿರ್ತನೆ ಜರುಗಲಿದೆ. ಏ. 1ರಂದು ಸಂಜೆ 4 ಗಂಟೆಗೆ ಕಡುಬಿನ ಕಾಳಗ, ರಾತ್ರಿ 8ಕ್ಕೆ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.