ಬಾಲಕಿ ಅತ್ಯಾಚಾರ ಆರೋಪಿ ಬಂಧನ
ಬ್ಯಾಡಗಿ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸ್ಥಳೀಯ ಪೋಲಿಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಬುಡಪನಹಳ್ಳಿ ಗ್ರಾಮದ ಮಂಜುನಾಥ ಬಸಪ್ಪ ಸುಣಗಾರ(ಕರಿನೆಲ್ಲಿ) ಎಂಬಾತ ಕಳೆದ ಮಾ. 17ರಂದು ಲಲಿತಾ ಶಿವಪ್ಪ ಹರಿಜನ ಎಂಬ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಮನೆಯಲ್ಲಿಯೇ ಅತ್ಯಾಚಾರವೆಸಗಿದ್ದ. ಘಟನೆಗೆ ಸಂಬಂಧಿಸಿದಂತೆ ಮಾ. 20ರಂದು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಸುದ್ದಿ ತಿಳಿದು ಪೊಲೀಸರ ಕಣ್ತಪ್ಪಿಸಿ ಮಂಜುನಾಥ ಪರಾರಿಯಾಗಿದ್ದ. ಪ್ರಕರಣದ ಜಾಡು ಬೆನ್ನು ಹತ್ತಿದ ಪೊಲೀಸರು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್, ಡಿವೈಎಸ್ಪಿ ಪೂಜಾರ ಹಾಗೂ ಸಿಪಿಐ ಚಿಕ್ಕರಡ್ಡಿ ಇವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸವರಾಜ ಕಲ್ಲಮ್ಮನವರ ಸಿಬ್ಬಂದಿ ಪಿ.ಕೆ. ಲಮಾಣಿ, ರಾಜು ಗೊಂದಿ, ಬಸವರಾಜ ಅಂಜುಟಗಿ ಖಚಿತ ಮಾಹಿತಿ ಪಡೆದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಲಗ್ಗೆರೆ ಗ್ರಾಮದಲ್ಲಿ ಆರೋಪಿ ಮಂಜುನಾಥನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ಹಾವೇರಿ ಜಿಲ್ಲಾ ಸತ್ರ ನ್ಯಾಯಾಧೀಶರೆದುರು ಹಾಜರುಪಡಿಸಿದ್ದಾರೆ.