ವಿವಿಧ ಪಕ್ಷ ತೊರೆದು ಕೆಜೆಪಿ ಸೇರ್ಪಡೆ
ಹಿರೇಕೆರೂರು: ಮಾಜಿ ಮುಖ್ಯಮಂತ್ರಿ ಬಿಎಸ್ವೈ ಅವರು ತಮ್ಮ ಆಡಳಿತ ಅವಧಿಯಲ್ಲಿ ರಾಜ್ಯಕ್ಕೆ ನೀಡಿರುವ ಹಲವಾರು ಕೊಡುಗೆಗಳನ್ನು ಮೆಚ್ಚಿ ತಾಲೂಕಿನ ಕಣವಿ ಶಿದ್ಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಕೊರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಮಾಜಿ ಶಾಸಕ ಯು.ಬಿ. ಬಣಕಾರ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಯು.ಬಿ. ಬಣಕಾರ ಕೆಜೆಪಿ ಬಾವುಟ ನೀಡುವ ಮೂಲಕ ಯಲಿವಾಳ ಗ್ರಾಮದ ಮುಖಂಡರಾದ ಚನ್ನಗೌಡ ಪಾಟೀಲ, ರಾಜು ಕೊರವರ, ಯಮನಪ್ಪ ಕೊರವರ, ಭೀಮಪ್ಪ ಕೊರವರ, ಪ್ರಭು ಕೊರವರ, ಬಸವರಾಜ ಕೊರವರ, ಲತೀಫ್ ಕಿರಗೇರಿ, ಕರಬಸಪ್ಪ ಕೊರವರ, ತಬರೀಸ್ ಗೌಡರ, ಭೀಮಪ್ಪ ಕೊರವರ, ಮುಕ್ತಿಯಾರ್ ಅಹ್ಮದ್ ದೊಡ್ಡಮನಿ ಇನ್ನಿತರರನ್ನು ಪಕ್ಷಕ್ಕೆ ಸೇರಿಸಿಕೊಂಡರು.