ಶಿಗ್ಗಾಂವಿ: ನಾಳೆ ಖಾಲಿ ಗಾಡಾ ಓಡಿಸುವ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 22
ತಾಲೂಕಿನ ಕಾಮನಹಳ್ಳಿಯ ಗ್ರಾಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಖಾಲಿ ಘಾಡಾ ಓಡಿಸುವ ಸ್ಪರ್ಧೆ ಮಾ. 24ರಂದು ಜರುಗಲಿದೆ. ಪ್ರಥಮ ಬಹುಮಾನವನ್ನು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪ್ರಾಯೋಜಿಸಿದ್ದಾರೆ.
ಮಾಜಿ ಸಂಸದ ಮಂಜುನಾಥ ಕುನ್ನೂರ, ಸಿದ್ದಪ್ಪ ಯಲಿಗಾರ, ಈರಪ್ಪ ಕಡಳ್ಳಿ ಇನ್ನಿತರ ಬಹುಮಾನಗಳನ್ನು ನೀಡಲಿದ್ದು, ಒಟ್ಟು 35 ಬಹುಮಾನ ವಿತರಿಸಲಾಗುವುದು ಎಂದು ಜಾತ್ರಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಾಯಲಿನ್ ವಾದಕ ಹನುಮಂತಪ್ಪ ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸುವರು.
ಅಧ್ಯಕ್ಷತೆಯನ್ನು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಹಿಸುವರು. ಫಕ್ಕೀರಯ್ಯ ಹಿರೇಮಠ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಶ್ರೀಕಾಂತ ದುಂಡಿಗೌಡ್ರ, ಜಿಪಂ ಸದಸ್ಯೆ ಸರೋಜಾ ಆಡೀನ, ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ, ಸದಸ್ಯೆ ಗೀತಾ ಹಂಚಿನಮನಿ ಉಪಸ್ಥಿತರಿರುವರು.
ವನಹಳ್ಳಿ ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ವಡ್ಡರ, ಡಿವೈಎಸ್ಪಿ ವಿ.ಎ. ಪೂಜಾರ, ಕೆಎಂಎಫ್ ನಿರ್ದೇಶಕ ಫಕ್ಕೀರಪ್ಪ ವಾಲ್ಮೀಕಿ, ಪಿಡಿಓ ಬಸವರಾಜ ಪೂಜಾರ, ಸಿಪಿಐ ಬಿ.ಬಿ. ಪಾಟೀಲ ಪಾಲ್ಗೊಳ್ಳುವರು.