ಕ್ರೀಡೆಗಳಲ್ಲಿ ಪಾಲ್ಗೊಳ್ಳಿ
ಹಿರೇಕೆರೂರು: ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಪೂರಕ. ಕ್ರೀಡಾ ಚಟುವಟಿಕೆಯಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಎಲ್ಲ ಕ್ರೀಡಾಪಟುಗಳೂ ಅರಿತುಕೊಳ್ಳಬೇಕು ಎಂದು ಮಾಜಿ ಶಾಸಕ ಯು.ಬಿ. ಬಣಕಾರ ನುಡಿದರು. ತಾಲೂಕಿನ ಸರ್ವಜ್ಞನ ಮಾಸೂರಲ್ಲಿ ಸರ್ವಜ್ಞ ಸ್ಪೋರ್ಟ್ಸ್ದಿಂದ ಮದಗದ ಕೆಂಚಮ್ಮನ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಮುಕ್ತ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷ ಚನ್ನಬಸಪ್ಪ ರಾಮಜ್ಜನವರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಬುರಡಿಕಟ್ಟಿ, ಅಬ್ದುಲ್ ಸಮದ್ ಹುಬ್ಬಳ್ಳಿ, ವಾಮನರಾವ್ ನಲವಾಡಿ, ಪಾಲಾಕ್ಷ ಪವಾರ್, ಹುಚ್ಚಪ್ಪ ಕನ್ನಕ್ಕನವರ, ಪುಟ್ಟಪ್ಪ ನೆಗಳೂರ, ರಾಜು ಕೊಟಗಿಮನಿ, ವೆಂಕಟೇಶ ವಾಡೇರ ಇದ್ದರು.