ಕ್ರಿಕೆಟ್: ಪ್ರಶಸ್ತಿ ವಿತರಣೆ
ಹಾನಗಲ್ಲ: ಭವಿಷ್ಯದ ಸವಾಲುಗಳಿಗಾಗಿ ಯುವಕರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳುವ ಅಗತ್ಯವಿದ್ದು, ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ ದೊಡ್ಡಮನಿ ಹೇಳಿದರು. ತಾಲೂಕಿನ ಕರಗುದರಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಹಾರ್ಡ್ ಟೆನಿಸ್ಬಾಲ್ ಕ್ರಿಕೆಟ್ ಟೂರ್ನಿಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಎ.ಐ. ಡೊಳ್ಳೇಶ್ವರ, ಎಂ.ಎಚ್. ಆಡೂರ, ಜಿ.ಎಚ್.ದೊಡ್ಡಮನಿ, ಎಂ.ಯು. ತುಬಾಕಿ, ಎಂ.ಪಿ. ದುರುಗದ, ಎಂ.ಎಚ್. ಚಿಗಳ್ಳಿ, ಎ.ಕೆ. ಡೊಳ್ಳೇಶ್ವರ ಮತ್ತಿತರರು ಉಪಸ್ಥಿತರಿದ್ದರು. ಮೂರು ದಿನಗಳ ವರೆಗೆ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ, ಹಾನಗಲ್ಲ ಮತ್ತಿತರ ಕಡೆಗಳಿಂದ 15 ತಂಡಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನವನ್ನು ಹಾನಗಲ್ಲಿನ ಸಚಿನ್ ಕ್ರಿಕೆಟ್ ಕ್ಲಬ್, ದ್ವಿತೀಯ ಬಹುಮಾನ ಮಾಪ್ಸಾ ಗೋವಾ ತಂಡ ಪಡೆಯಿತು.
ಮಹಾತ್ಮರ ಆದರ್ಶ ಅಳವಡಿಸಿಕೊಳ್ಳಿ
ಶಿಗ್ಗಾಂವಿ: ಮಹಾತ್ಮರನ್ನು ಸ್ಮರಿಸುವುದು, ಅವರ ಎರಡು ಮಾತುಗಳನ್ನು ಕೇಳುವುದು ಅವಶ್ಯವಾಗಿದೆ. ಬದುಕಿನಲ್ಲಿ ಆದರ್ಶಗಳನ್ನು ಅನುಸರಿಸುವುದು ಮತ್ತು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಶಿರಹಟ್ಟಿ ಫಕೀರಸಿದ್ಧರಾಮ ಶ್ರೀಗಳು ನುಡಿದರು. ತಾಲೂಕಿನ ಕುನ್ನೂರು ಗ್ರಾಮಕ್ಕೆ ಭೇಟಿ ನೀಡಿ ವಾಸ್ತ್ಯವ್ಯ ಮಾಡಿದ್ದ ಶಿರಹಟ್ಟಿ ಸಂಸ್ಥಾನಮಠದ 13ನೇ ಪಟ್ಟಾಧ್ಯಕ್ಷ ಫಕೀರಸಿದ್ದರಾಮ ಶ್ರೀಗಳು ಗ್ರಾಮದ ಹಿರೇಮಠದ ಗದ್ದುಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳನ್ನು ಸನ್ಮಾನಿಸಿ ಗೌರವ ಸಮರ್ಪಣೆ ಸ್ವೀಕರಿಸಿ ನಂತರ ಮಾತನಾಡಿದರು. ಮುಖಂಡ ಎಲ್.ಆರ್. ಪಾಟೀಲ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟೀಲ, ಶಿವಯ್ಯ ಸ್ವಾಮೀಜಿ ಹಿರೇಮಠ, ಸಿ.ವಿ. ಮತ್ತಿಗಟ್ಟಿ, ಶಿವಾನಂದ ಸ್ವಾಮಿ ಹಿರೇಮಠ, ಗಂಗಪ್ಪ ಹುಲ್ಲೂರು, ಶಶಿಧರಗೌಡ್ರ ಪಾಟೀಲ, ಶಿದ್ರಾಮಗೌಡ್ರ ಪಾಟೀಲ, ಗದಿಗೆಯ್ಯ ಹಿರೇಮಠ, ನಿಲಕಂಠಗೌಡ ಬ್ಯಾಹಟ್ಟಿ, ರಹಿಮಾನಸಾಬ ಮುಲ್ಲಾ, ಸುರೇಶಗೌಡ ಪಾಟೀಲ, ಚಮನಸಾಬ ಮತ್ತೇಖಾನ, ಭರಮಗೌಡ್ರ ಪಾಟೀಲ, ಮಹದೇವಪ್ಪ ಬಿರವಳ್ಳಿ, ಯಮನಪ್ಪ ನವಲೂರು, ರಾಮಪ್ಪ ಕರಡಿ, ಹುಸೇನಸಾಬ ಬಂಕಾಪುರ, ರುದ್ರಯ್ಯ ಹಿರೇಮಠ, ಬಸವರಾಜ ಬೂದ್ಯಾಳ, ರುದ್ರಪ್ಪ ಕರಡಿ ಉಪಸ್ಥಿತರಿದ್ದರು. ಸೋಮಯ್ಯ ಹಿರೇಮಠ ಸ್ವಾಗತಿಸಿದರು. ಬಿ.ಎಸ್. ಹಿರೇಮಠ ನಿರ್ವಹಿಸಿದರು.