ಟಿಪ್ಪು ವೇದಿಕೆಗ್ರಾಮ ಘಟಕ ಉದ್ಘಾಟನೆ
ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ಗ್ರಾಮೀಣ ಘಟಕ ಪದಾಧಿಕಾರಿಗಳನ್ನು ತಾಲೂಕಾಧ್ಯಕ್ಷ ಸತ್ತಾರಸಾಬ ಅರಳೇಶ್ವರ ನೇಮಕ ಮಾಡಿದರು.
ಮಹ್ಮದಸಲಿಂ ಮಕಾಂದಾರ (ಅಧ್ಯಕ್ಷ), ಸಯ್ಯದ ಇಬ್ರಾಹಿಂ ಖತೀಬ (ಕಾರ್ಯಾಧ್ಯಕ್ಷ), ಚಮನಸಾಬ ಲಡ್ಡುಪೀರ (ಪ್ರಧಾನ ಕಾರ್ಯದರ್ಶಿ) ಇಮಾಮಖಾನ ನೆಗಳೂರ (ಖಜಾಂಚಿ), ಅಬ್ದುಲ್ ರಶೀದ ವಾಗಿಕೊಪ್ಪ (ಸಂಘಟನಾ ಕಾರ್ಯದರ್ಶಿ), ಮಹ್ಮದ ಹನೀಫ ಬಂಕಾಪುರ (ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಯಿತು. ಬಮ್ಮನಹಳ್ಳಿ ಅಂಜುಮನ್ ಅಧ್ಯಕ್ಷ ಹಜರೆಸಾಬ ಮಕಾನದಾರ, ಮುಖಂಡರಾದ ಜಾಫರಸಾಬ ಲಡ್‌ಡುಪೀರ, ಭಾಷಾಲಾಲ ಮಕಾನದಾರ, ಅಬ್ದುಲಸಾಬ ಬಂಕಾಪೂರ, ಹಜರೆಸಾಬ ವಾಗಿಕೊಪ್ಪ, ಶೇರಅಲಿಸಾಬ ಮುಲ್ಲಾ ಉಪಸ್ಥಿತರಿದ್ದರು.