ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತವರಿನ ಸುಖ ಅವರ್ಣನೀಯ: ಜೋಶಿ

Rashmi Kasaragodu
Updated On : 25 Mar 2013, 10:44 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ.24
ತವರಿನ ಸುಖ ಅವರ್ಣನೀಯ. ಇದನ್ನು ಅನುಭವಿಸುವ ಮನಸ್ಸು ಹೃದಯವಂತಿಕೆ ಬೇಕು ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಮಹೇಶ ಜೋಶಿ ನುಡಿದರು.
ನೆವಪು ಮರೆಯಲಾಗದು: ತಾಲೂಕಿನ ಅವರ ಹುಟ್ಟೂರಾದ ಬಮ್ಮನಹಳ್ಳಿಯಲ್ಲಿ ಪ್ರಶಸ್ತಿಗಾಗಿ ತವರಿನ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜನ್ಮ ಭೂಮಿ ಗೌರವಿಸಬೇಕು. ಅದರ ಹೆಮ್ಮೆಯೂ ಬೇಕು. ನಾನು ಈಗಲೂ ಬಮ್ಮನಹಳ್ಳಿಯ ಹುಡುಗನೇ ಎಂಬ ಭಾವವಿದೆ. ಇದು ಸಾಹಿತ್ಯ, ಸಂಗೀತ, ಸಂಸ್ಕೃತಿಯ ಗಟ್ಟಿ ನೆಲ. ಬೊಮ್ಮನಹಳ್ಳಿಯ ಜನ ನನ್ನನ್ನು ತಮ್ಮ ಮನೆಯ ಮಗನಾಗಿ ಬೆಳೆಸಿದರು. ಆ ಕೃತಜ್ಞತೆ ಮರೆಯಲಾಗದು ಎಂದು ಭಾವುಕರಾದರು.
ಸಂಸ್ಕೃತಿ ಬೆಳೆಸಿಕೊಳ್ಳಿ: ನಾಳಿನ ಪೀಳಿಗೆಯ ಉನ್ನತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದು. ನಾವು ಮಕ್ಕಳ ಮನದಲ್ಲಿ ನಮ್ಮ ಚರಿತ್ರೆಯ ನಿಜರೂಪ ನೀಡಬೇಕು. ನಾಳಿನ ಭಾರತದ ಭವಿಷ್ಯಕ್ಕೆ ನಾವು ನಮ್ಮ ಸಂಸ್ಕೃತಿಯ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.
ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆಯನ್ನು ನಿಂಗಪ್ಪ ಮುದುಕಣ್ಣನವರ ವಹಿಸಿದ್ದರು. ಈ ಸಂದರ್ಭ ತಾಪಂ ಸದಸ್ಯೆ ಮಂಜುಳಾ ಕಾಮನಹಳ್ಳಿ, ಸಿ.ಬಿ.ಪಾಟೀಲ, ದೊಡ್ಡಬಸಪ್ಪ ಮಲ್ಲಮ್ಮನವರ, ಉದಯನಾಶಿಕ, ಗಿರೀಶ ದೇಶಪಾಂಡೆ, ಬಸವರಾಜ ಹುಲಗೂರು, ಶಿವನಗೌಡ್ರ ಹಾರ್ಕಿ, ಪರಶುರಾಮ ರಜಪೂತ, ಎನ್.ಎನ್. ಪಾಟೀಲ, ಶೇಕಣ್ಣ ಮಹರಾಜಪೇಟ, ಡಾ೤ ಹರೀಶ ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಪಿ.ಡಿ. ಭಜಂತ್ರಿ ಸ್ವಾಗತಿಸಿ, ಎಚ್.ಪಿ. ದಾಸ ನಿರ್ವಹಿಸಿದರು. ಎಸ್.ಬಿ. ಜೋಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement