ಶಿಸ್ತು, ಆತ್ಮಸ್ಥೈರ್ಯ ಅಳವಡಿಸಿಕೊಳ್ಳಿ: ಸಾಲಿ
ಹಿರೇಕೆರೂರು: ಆಧುನಿಕ ಸಮಾಜ ವಿನಾಶದ ಅಂಚಿಗೆ ತಲುಪಿದ್ದು, ಯುವಕರು ಸ್ವಯಂಪ್ರೇರಣೆಯಿಂದ ಮನೋಬಲ ವೃದ್ಧಿಸಿಕೊಳ್ಳಬೇಕು. ಶಿಬಿರಾರ್ಥಿಗಳು ಶಿಬಿರದ ಮೂಲಕ ಪಡೆದುಕೊಂಡ ಶಿಸ್ತು, ಶ್ರಮದಾನ, ಆತ್ಮಸ್ಥೈರ್ಯಗಳನ್ನು ಮೊಟಕುಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಕರೆ ನೀಡಿದರು.
ತಾಲೂಕಿನ ಚಿಕ್ಕಯಡಚಿ ಗ್ರಾಮದ ಸಿದ್ದೇಶ್ವರ ಸಮುದಾಯ ಭವನದಲ್ಲಿ ರಟ್ಟಿಹಳ್ಳಿಯ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜು ಮತ್ತು ಎನ್ನೆಸ್ಸೆಸ್ ಘಟಕದಿಂದ ಜರುಗಿದ ಎನ್ನೆಸ್ಸೆಸ್ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿದರು.
ಶಿಬಿರಾಧಿಕಾರಿ ರಾಘವೇಂದ್ರ ಎ.ಜಿ, ಗ್ರಾಮದ ಜನರನ್ನು ಸರ್ವೇ ಮಾಡಲಾಗಿ ಗ್ರಾಮದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಿದೆ ಎಂದರು. ಜಿಲ್ಲಾ ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಸಾವಜ್ಜಿಯವರ, ಕರೇಗೌಡ ಸಣ್ಣಗೌಡ್ರ, ಕೆ.ಆರ್. ಪಾಟೀಲ, ನಿವೃತ್ತ ಶಿಕ್ಷಕ ಎಸ್.ಆರ್. ದೊಡ್ಡಬಸಪ್ಪನವರ, ಬಿ.ಎಸ್. ಗುಬ್ಬೇರ ಮಾತನಾಡಿದರು. ಶಿಭಿರಾರ್ಥಿಗಳ ಪರ ಜಗದೀಶ ಪೂಜಾರ, ಕವಿತಾ ಎಂ, ಕೋಟೆಪ್ಪ ಯತ್ನಳ್ಳಿ ಮಾತನಾಡಿದರು.
ಚನ್ನಪ್ಪ ಕೊಣತಿ, ಆರ್.ಎಸ್. ಪಾಟೀಲ, ಸಿದ್ದಪ್ಪ ಉಪ್ಪಾರ, ಕುಮಾರ ಕೆಳಗಿನಮನಿ, ಪ್ರಾಚಾರ್ಯ ಡಾ. ಎಂ.ಬಿ. ತಲ್ಲೂರ, ಎಚ್.ಬಿ. ಕೆಂಚಳ್ಳಿ, ಸಿ.ಎಸ್. ಕಮ್ಮಾರ ಉಪಸ್ಥಿತರಿದ್ದರು. ಬೀರೇಶ ಕಣಜೇರ ನಿರ್ವಹಿಸಿದರು. ಬಳಿಕ ದೀಪದಾನ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.