ಹಾನಗಲ್: ಜಂಗಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಹಾನಗಲ್ಲ: ತಾಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಬಸಯ್ಯ ಹಿರೇಮಠ, ಗೌರವಾಧ್ಯಕ್ಷರಾಗಿ ಡಾ. ವಿಶ್ವರಾಧ್ಯ ಪುರಾಣಿಕಮಠ ಆಯ್ಕೆಯಾಗಿದ್ದಾರೆ.
ಇಲ್ಲಿನ ಗೌರಮ್ಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಂಗಮ ಸಮಾಜದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಮೃತ್ಯುಂಜಯ ಹಿರೇಮಠ ಹಾಗೂ ಶಿವಯೋಗಿ ಅರಳೆಲಿಮಠ(ಉಪಾಧ್ಯಕ್ಷ), ಪ್ರೊ. ವಿ.ಜಿ. ಶಾಂತಪುರಮಠ (ಗೌರವ ಕಾರ್ಯದರ್ಶಿ), ಎಸ್.ಪಿ.ಅರಮನೆಮಠ (ಸಹಕಾರ್ಯದರ್ಶಿ), ಎಸ್.ವಿ. ಮಠದ (ಖಜಾಂಚಿ), ನಿರ್ದೇಶಕರಾಗಿ ಡಾ. ಎನ್.ಆರ್. ಕಿತ್ತೂರಮಠ, ರುದ್ರಯ್ಯ ಹಿರೇಮಠ, ರವಿಕಿರಣ ಪಾಟೀಲ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.